ಊಹಿಸಲು ಸಾಧ್ಯವಾಗದ ಅನೇಕ ವಿಷಯಗಳಲ್ಲಿ ವಿಶ್ವದಾಖಲೆಗಳನ್ನು ಬರೆದವರಿದ್ದಾರೆ. ಆದರೆ ಇತ್ತೀಚೆಗಷ್ಟೇ ಎರಡು ಚಟುವಟಿಕೆಗಳನ್ನು ಒಟ್ಟಿಗೆ ನಡೆಸಿ ದಾಖಲೆ ಮುರಿಯುವ ಅಪರೂಪದ ಪ್ರಯತ್ನವೊಂದು ಅನಧಿಕೃತವಾಗಿ ನಡೆದಿದೆ.
ಮೈಕೆಲ್ ರ್ಬಗೆರಾನ್ ಎಂಬವರು “ಜಗ್ಲಿಂಗ್ ಮಾಡುತ್ತಾ ಹತ್ತು ಕಿಲೋಮೀಟರ್ಗಳನ್ನು 34 ನಿಮಿಷ ಮತ್ತು 47 ಸೆಕೆಂಡುಗಳಲ್ಲಿ’ ಓಡಿ ವಿಶ್ವದಾಖಲೆ ಪುಸ್ತಕದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಲು ಪ್ರಯತ್ನಿಸಿದ್ದಾರೆ.
ಕೆನಡಾದ ಪ್ರಿನ್ಸ್ ಎಡ್ವರ್ಡ್ ದ್ವೀಪದ ನಿವಾಸಿ ವೇಗವಾಗಿ ಹತ್ತು ಕಿಲೋಮೀಟರ್ ಜಾಗಿಂಗ್ ಮಾಡಿದ ದಾಖಲೆಯನ್ನು ಮಾಡುವ ಪ್ರಯತ್ನವನ್ನು ಪ್ರದರ್ಶಿಸಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನ ಅಧಿಕೃತ ಸೈಟ್ನ ಪ್ರಕಾರ, ಕೆನಡಾದ ಟೊರೊಂಟೊ ನಿವಾಸಿಯಾಗಿರುವ ಕಪ್ರಾಲ್ 2006 ರ ಸೆ.10ರಂದು ಜಗ್ಲಿಂಗ್ ಮಾಡುತ್ತಾ 10 ಕಿಮೀ ಜಾಗಿಂಗ್ ಮಾಡಿ ವಿಶ್ವದಾಖಲೆ ಮಾಡಿದ್ದರು. ಲಾಂಗ್ ಬೋಟ್ ಟೊರೊಂಟೊ ಐಲ್ಯಾಂಡ್ ರನ್ನಲ್ಲಿ ಕಪ್ರಾಲ್ 3 ಬೀನ್ ಬ್ಯಾಗ್ಗಳನ್ನು 36 ನಿಮಿಷ ಮತ್ತು 27 ಸೆಕೆಂಡುಗಳಲ್ಲಿ ಬೀಳಿಸದೆ ದಾಖಲೆ ಬರೆದಿದ್ದರು.
ಮತ್ತೆ ಸಿಕ್ತು ಜನಸಂದಣಿಯಲ್ಲಿ ಕಳೆದು ಹೋದ ಯುವತಿ ಮೊಬೈಲ್…!
2018 ರಲ್ಲಿ ಮೈಕೆಲ್ ಅದೇ ದಾಖಲೆಯನ್ನು ಮುರಿಯಲು ಪ್ರಯತ್ನಿಸಿ 36 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮುಗಿಸಿದ್ದರು, ಆದರೆ ತಾಂತ್ರಿಕ ಕಾರಣಕ್ಕೆ ಅನರ್ಹಗೊಳಿಸಲಾಯಿತು.
ಜೋಗ್ಲರ್ ತನ್ನ ಇತ್ತೀಚಿನ ಸಾಧನೆಯ ಬಗ್ಗೆ ಮತ್ತು 10 ಕಿಮೀ ದೂರದ ಜಾಗಿಂಗ್ ನಂತರ ನೋವಿನಲ್ಲಿದ್ದರೂ, ತನ್ನ ಸಾಧನೆಯ ಬಗ್ಗೆ “ಸೂಪರ್ ಹ್ಯಾಪಿ” ಎಂದು ಬಹಿರಂಗಪಡಿಸಿದರು. ಇದನ್ನು ಅಧಿಕೃತವಾಗಿ ದೃಢೀಕರಿಸುವ ಪ್ರಯತ್ನದಲ್ಲಿ, ಇದೀಗ ಈ ಪ್ರಯತ್ನದ ಪುರಾವೆಗಳನ್ನು ಗಿನ್ನೆಸ್ ವಿಶ್ವ ದಾಖಲೆಗೆ ಸಲ್ಲಿಸಲಾಗುತ್ತಿದೆ ಎಂದರು.