ಫುಟ್ಬಾಲ್ ಮಾಜಿ ಆಟಗಾರ ಡೇವಿಡ್ ಬೆಕ್ಹ್ಯಾಮ್ ಮಂಗಳವಾರ ಯುರೋ ಕಪ್ 2020ಯಲ್ಲಿ ಇಂಗ್ಲೆಂಡ್ ತಂಡಕ್ಕೆ ಬೆಂಬಲ ನೀಡುವ ಸಲುವಾಗಿ ತಮ್ಮ ಪುತ್ರ ರೋಮಿಯೋ ಬೆಕ್ಹ್ಯಾಮ್ ಜೊತೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ್ರು.
ಆದರೆ ಪಂದ್ಯಕ್ಕಿಂತಲೂ ರೋಚಕ ವಿಚಾರ ಎಂಬಂತೆ ಸ್ಟೇಡಿಯಂನಲ್ಲಿ ಈ ತಂದೆ ಹಾಗೂ ಮಗ ಕ್ಲಿಕ್ಕಿಸಿಕೊಂಡ ಸೆಲ್ಫಿಯೊಂದು ಇದೀಗ ಇನ್ಸ್ಟಾಗ್ರಾಂನಲ್ಲಿ ಸಖತ್ ಸುದ್ದಿ ಮಾಡಿದೆ.
ಇಂಗ್ಲೆಂಡ್ ತಂಡದ ಗೆಲುವನ್ನ ಸಂಭ್ರಮಿಸುವ ಸಲುವಾಗಿ 46 ವರ್ಷದ ಆಟಗಾರ ಈ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಆದರೆ ಈ ಫೋಟೋದಲ್ಲಿ ಬ್ರಿಟಿಷ್ ರಾಜ ಮನೆತನದ ದಂಪತಿ ಕಾಣಿಸಿಕೊಂಡಿದೆ.
ಕೇಟ್ ಮಿಡಲ್ಟನ್ ಹಾಗೂ ಪ್ರಿನ್ಸ್ ವಿಲಿಯಮ್ ಕೂಡ ಈ ಫೋಟೋದಲ್ಲಿ ಇದ್ದಾರೆ. ಇದನ್ನ ಬಹುಬೇಗನೆ ಗುರುತಿಸಿದ ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.