ಪ್ರೇಮಿಗಳ ದಿನಾಚರಣೆಯ ಸಪ್ತಾಹಕ್ಕೆ ಮಂಗಳವಾರದಿಂದ ಚಾಲನೆ ಸಿಕ್ಕಿದ್ದು ಫೆಬ್ರವರಿ 14ರ ದಿನವನ್ನು ಅದ್ಧೂರಿಯಾಗಿ ಆಚರಿಸಲು ಗ್ರೀಟಿಂಗ್ ಕಾರ್ಡ್ ತಯಾರಕರಿಂದ ಹಿಡಿದು ಆನ್ಲೈನ್ ಎಮೋಜಿಗಳ ತಯಾರಕರವರೆಗೂ ಸಿದ್ದತೆಗಳು ಸಾಗಿವೆ.
ಬ್ರಿಟನ್‌ನ ರೀಟೇಲರ್ 247 ಬ್ಲೈಂಡ್ಸ್ ವ್ಯಾಲೆಂಟೈನ್ಸ್ ದಿನಕ್ಕೆಂದು ವಿಶೇಷವಾದ ದೃಷ್ಟಿ ಭ್ರಮಣೆಯ ಚಿತ್ರಗಳನ್ನು ಬಿಡುಗಡೆ ಮಾಡಿದೆ. ವೈರಲ್ ಆಗಿರುವ ಈ ಚಿತ್ರದಲ್ಲಿರುವ ಹೃದಯಾಕಾರದ ಬಲೂನ್ ಒಂದು ಅಡಗಿದ್ದು, ಅದನ್ನು ಪತ್ತೆ ಮಾಡಬೇಕಾಗುತ್ತದೆ.
ಹೀಲಿಯಂ ಅನಿಲ ಸೇವಿಸಿದ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ..!
ವ್ಯಾಲೆಂಟೈನ್ಸ್ ದಿನದ ಥೀಂನ ಚಿತ್ರಗಳ ನಡುವೆ ಈ ಬಲೂನ್ ಇದ್ದು, ಅದನ್ನು ಹುಡುಕಲು ಹೊರಟವರ ತಲೆಗೆ ಒಳ್ಳೆ ಕೆಲಸ ಸಿಕ್ಕಂತೆ ಆಗುತ್ತದೆ.
ಪಿಂಕ್ ಹಿನ್ನೆಲೆಯ ಈ ಚಿತ್ರವನ್ನು 247 ಬ್ಲೈಂಡ್ಸ್ ವ್ಯಾಲೆಂಟೈನ್ಸ್ ದಿನದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದೆ.