ತಲೆ ಕೆರೆದುಕೊಳ್ಳುವಂತೆ ಮಾಡಿದ ಚಿತ್ರಗಳನ್ನು ನೀವೂ ಸಾಕಷ್ಟು ಕಂಡಿದ್ದೀರಲ್ಲವೇ ? ಕೆಲವು ತುಂಬ ಗೊಂದಲ ಮೂಡಿಸುತ್ತವೆ. ಅಂಥ ಚಿತ್ರಗಳ ಖಯಾಲಿ ನಿಮಗಿದ್ದರೆ, ಇದೋ ಇಲ್ಲೊಂದು ಇದೆ. ನೋಡಲು ಸರಳವಾಗಿದೆ. ಇದನ್ನು ಜಾಲತಾಣಗಳಲ್ಲಿ ಹಾಕಿದ್ದು, ನೆಟ್ಟಿಗರು ಇದರಲ್ಲಿ 16 ವೃತ್ತಗಳನ್ನು ಗುರುತಿಸಬೇಕಿದೆ.
ಕೇವಲ ಚೌಕಾಕಾರಗಳೇ ಕಾಣುತ್ತಿವೆ. ವೃತ್ತಗಳೆಲ್ಲಿವೆ ಎಂದು ನೀವು ತಲೆ ಕೆಡಿಸಿಕೊಳ್ಳುತ್ತೀರಿ. ಇದನ್ನು ಕಾಫರ್ ಇಲ್ಯೂಜನ್ ಎನ್ನುತ್ತಾರೆ. ಚೌಕಗಳ ಮಧ್ಯೆ ವೃತ್ತಗಳು ಎಲ್ಲಿವೆಯೋ ಎಂದು ಜನರು ಹುಡುಕುತ್ತಿದ್ದಾರೆ. ಆದರೆ, ಅವು ಎಲ್ಲರ ಕಣ್ಣಿಗೂ ಬೀಳಲು ಸಾಧ್ಯವೇ?
ದೃಷ್ಟಿ ಭ್ರಮೆಯ ಈ ಚಿತ್ರವನ್ನು ರಚಿಸಿದವರು ಅಂಥೋನಿ ನಾರ್ಸಿಯಾ. ಈ ಚಿತ್ರವು ನಮ್ಮ ದೃಷ್ಟಿಯನ್ನು ಪರೀಕ್ಷಿಸುತ್ತದೆ. ಜತೆಗೆ, ಮೂಲೆಗಳು ಮತ್ತು ಕೋನಗಳ ಕುರಿತಾಗಿ ನಮ್ಮ ಮೆದುಳಿನ ಯೋಚನೆಗಳನ್ನು ಚುರುಕುಗೊಳಿಸುತ್ತದೆ. ಚೌಕಗಳನ್ನು ಒಂದರ ಒಳಗೊಂದು ಕೂರಿಸಿ, ಒಂದು ಪರಿಣಾಮವನ್ನು ಸೃಷ್ಟಿಸಲಾಗಿದೆ.
ಅವುಗಳನ್ನು ಅಕ್ಕಪಕ್ಕದಲ್ಲಿ ಇರಿಸಿದ್ದು, ಅವುಗಳ ಮಧ್ಯೆ ಒಂದು ವೃತ್ತಾಕಾರವು ರಚನೆಯಾಗಿರುತ್ತದೆ. ಚೌಕದ ಬದಿಗಳು 3ಡಿ ಲುಕ್ ಹೊಂದಿವೆ. ಅವೇ ವೃತ್ತದ ಆಕಾರವನ್ನು ನೀಡುತ್ತವೆ. ಚಿತ್ರವನ್ನು ಎಚ್ಚರಿಕೆಯಿಂದ ಗಮನಿಸಿದರೆ ಮಾತ್ರ ಇವು ನಮಗೆ ಗೋಚರಿಸಬಲ್ಲವು.
ಬಹುನಿರೀಕ್ಷಿತ ಎಲ್ಐಸಿ ಐಪಿಒ ನಾಳೆ ಆರಂಭ