alex Certify ಅತ್ಯಂತ ಐಷಾರಾಮಿ ಬುಗಾಟ್ಟಿ ವಾಚ್​ ಬಿಡುಗಡೆ: ವಿಶೇಷತೆ ಏನು ? ಬೆಲೆ ಎಷ್ಟು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಂತ ಐಷಾರಾಮಿ ಬುಗಾಟ್ಟಿ ವಾಚ್​ ಬಿಡುಗಡೆ: ವಿಶೇಷತೆ ಏನು ? ಬೆಲೆ ಎಷ್ಟು ಗೊತ್ತಾ ?

ವಿಶ್ವದ ಅತ್ಯಂತ ಐಷಾರಾಮಿ ಆಟೋಮೊಬೈಲ್ ಬ್ರಾಂಡ್‌ಗಳಲ್ಲಿ ಒಂದಾದ ಬುಗಾಟ್ಟಿ, VIITA ವಾಚ್‌ಗಳ ಸಹಯೋಗದೊಂದಿಗೆ ಇತ್ತೀಚೆಗೆ ವಾಚ್‌ಗಳನ್ನು ಪರಿಚಯಿಸಿದೆ. ಪ್ರಪಂಚದ ಮೊದಲ ಸೀಮಿತ-ಚಾಲಿತ ಸ್ಮಾರ್ಟ್ ವಾಚ್ ಆಗಿದೆ ಮತ್ತು ಸಂಪೂರ್ಣ ಕಾರ್ಬನ್ ಫೈಬರ್ ಹೌಸಿಂಗ್‌ನೊಂದಿಗೆ ಇದನ್ನು ನಿರ್ಮಿಸಲಾಗಿದೆ.

ಈ ಹಿಂದೆ ಇದ್ದ ಬುಗಾಟ್ಟಿ ಸೆರಾಮಿಕ್ ಆವೃತ್ತಿಯ ವಾಚ್​ಗಿಂತ ಈ ಹೊಸ ವಾಚ್​ನ ಬ್ಯಾಟರಿ ಸಾಮರ್ಥ್ಯವನ್ನು 22% ರಿಂದ 540 mAh ಗೆ ಹೆಚ್ಚಿಸಲಾಗಿದೆ, ಇದರ ಒಟ್ಟಾರೆ ತೂಕವನ್ನು 13% ರಷ್ಟು ಕಡಿಮೆ ಮಾಡಲಾಗಿದೆ. ಸಾಮಾನ್ಯ ಬಳಕೆಯಲ್ಲಿ, ಜಿಪಿಎಸ್​ ಸೇವೆಗಳಿಲ್ಲದೆ, ಬ್ಯಾಟರಿಯು 15 ದಿನಗಳವರೆಗೆ ಚಲಿಸುತ್ತದೆ. ಸದಾ ಆನ್ ಮೋಡ್‌ನಲ್ಲಿದ್ದರೆ ಎರಡರಿಂದ ಮೂರು ದಿನಗಳ ಬ್ಯಾಟರಿ ಅವಧಿಯನ್ನು ನಿರೀಕ್ಷಿಸಬಹುದು ಎಂದು ಕಂಪೆನಿ ಹೇಳಿದೆ.

ಗಡಿಯಾರವು ಹೃದಯ ಬಡಿತವನ್ನು ಗುರುತಿಸಬಲ್ಲುದು. ಇದಕ್ಕಾಗಿ ಡ್ಯುಯಲ್-ಸೆನ್ಸರ್ ಅಳವಡಿಕೆ ಮಾಡಲಾಗಿದೆ. ಹೃದಯರಕ್ತನಾಳದ ಚೇತರಿಕೆ, ಜೈವಿಕ ವಯಸ್ಸು ಮತ್ತು ಒತ್ತಡದ ಮಟ್ಟದ ಮಾಪನಗಳನ್ನೂ ಇದು ಗುರುತಿಸಬಲ್ಲದು. ನಿದ್ರೆಯ ಮೇಲ್ವಿಚಾರಣೆಯಂತಹ ಕಾರ್ಯಗಳನ್ನೂ ಇದು ತಿಳಿಸುವ ಸಾಮರ್ಥ್ಯ ಹೊಂದಿದೆ.

ಪ್ರತಿ ಬುಗಾಟ್ಟಿ ಸ್ಮಾರ್ಟ್ ವಾಚ್ ಐದು ವರ್ಷಗಳ ವಾರಂಟಿಯನ್ನು ಪಡೆಯುತ್ತದೆ. ಅಂದಹಾಗೆ ಈ ಐಷಾರಾಮಿ ಸ್ಮಾರ್ಟ್​ ವಾಚ್​ ಬೆಲೆ ಎಷ್ಟು ಗೊತ್ತಾ? 2,590 ಯುರೋಗಳು ಅಂದರೆ ಸುಮಾರು 2.10 ಲಕ್ಷ ರೂಪಾಯಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...