alex Certify RO ವೇಸ್ಟ್‌ ವಾಟರ್‌ ನಿಂದ ಸ್ನಾನ ಮಾಡಬಹುದೇ ? ಇಲ್ಲಿದೆ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RO ವೇಸ್ಟ್‌ ವಾಟರ್‌ ನಿಂದ ಸ್ನಾನ ಮಾಡಬಹುದೇ ? ಇಲ್ಲಿದೆ ಉಪಯುಕ್ತ ಮಾಹಿತಿ

ಶುದ್ಧ ನೀರು ಕುಡಿಯಲು ಎಲ್ಲಾ ಮನೆಗಳಲ್ಲೂ RO ವಾಟರ್ ‌ಪ್ಯೂರಿಫೈಯರ್‌ಗಳನ್ನು ಹಾಕಿಸಿಕೊಂಡಿರ್ತಾರೆ. ಅನೇಕರು 25 ಲೀಟರ್‌ ನೀರಿನ ಕ್ಯಾನ್‌ಗಳನ್ನ ಬಳಸ್ತಾರೆ. ಎರಡೂ ಸಂದರ್ಭಗಳಲ್ಲಿ ಶುದ್ಧೀಕರಿಸುವಾಗ ಬಹಳಷ್ಟು ನೀರು ವ್ಯರ್ಥವಾಗುತ್ತದೆ. ಹೀಗಿರುವಾಗ ಆ ತ್ಯಾಜ್ಯ ನೀರಿನಿಂದ ನಾವು ಸ್ನಾನ ಮಾಡಬಹುದೇ ಅಥವಾ ಬೇಡವೇ ಎಂಬ ಯೋಚನೆ ಎಲ್ಲರಿಗೂ ಬರಬಹುದು. RO ವೇಸ್ಟ್‌ ವಾಟರ್‌ ಸ್ನಾನಕ್ಕೆ ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು.

ROನಿಂದ ಎಷ್ಟು ನೀರು ವ್ಯರ್ಥವಾಗುತ್ತದೆ ?

ವಾಟರ್ ಪ್ಯೂರಿಫೈಯರ್‌ನಿಂದ ಒಂದು ಲೀಟರ್ ಶುದ್ಧ ನೀರನ್ನು ಪಡೆಯಲು 3 ಲೀಟರ್ ನೀರು ವ್ಯರ್ಥವಾಗುತ್ತದೆ. ಇದರರ್ಥ ನೀರನ್ನು ಶುದ್ಧೀಕರಿಸಿದ ನಂತರ ಅದರಲ್ಲಿ 2 ಲೀಟರ್ ವ್ಯರ್ಥವಾಗುತ್ತದೆ, ಅದನ್ನು ನಾವು ಡ್ರೈನ್‌ಗೆ ಹರಿಸುತ್ತೇವೆ. ಈ ತ್ಯಾಜ್ಯ ನೀರಿನಲ್ಲಿ ಟೋಟಲ್ ಡಿಸಾಲ್ವ್ಡ್ ಸಾಲಿಡ್ (ಟಿಡಿಎಸ್) ಪ್ರಮಾಣ ಅತಿ ಹೆಚ್ಚು ಎನ್ನುತ್ತಾರೆ ತಜ್ಞರು. ಈ ಕಾರಣದಿಂದಾಗಿ, ಯಾವುದೇ ಸಂದರ್ಭದಲ್ಲೂ ಇದನ್ನು ಕುಡಿಯಬಾರದು.

RO ತ್ಯಾಜ್ಯ ನೀರಿನಿಂದ ಸ್ನಾನ ಮಾಡಬಹುದೇ ?

ಆರ್‌ಓ ವೇಸ್ಟ್‌ ವಾಟರ್‌ನಿಂದ ಸ್ನಾನ ಕೂಡ ಮಾಡಬಾರದು. ಅದರಲ್ಲಿ ಸಾವಯವ ಪದಾರ್ಥಗಳು ಮತ್ತು ಅಜೈವಿಕ ಲವಣಗಳು ವಿವಿಧ ಪ್ರಮಾಣದಲ್ಲಿ ಕಂಡುಬರುತ್ತವೆ. ಇದರಿಂದಾಗಿ ಆ ನೀರು ಸಾಕಷ್ಟು ಕಲುಷಿತಗೊಂಡಿರುತ್ತದೆ. ಜೊತೆಗೆ ಅದರಲ್ಲಿ ಟಿಡಿಎಸ್ ಪ್ರಮಾಣವೂ ತುಂಬಾ ಹೆಚ್ಚಾಗಿರುತ್ತದೆ. ಆ ತ್ಯಾಜ್ಯ ನೀರಿನಿಂದ ಸ್ನಾನ ಮಾಡಲು ಆರಂಭಿಸಿದರೆ ರಿಂಗ್ ವರ್ಮ್, ತುರಿಕೆ ಮೊದಲಾದ ಚರ್ಮರೋಗಗಳು ಬರಬಹುದು. ತಲೆಕೂದಲು ಕೂಡ ಉದುರಿ ಹೋಗುವ ಸಾಧ್ಯತೆ ಇರುತ್ತದೆ.

ನೀವು ನೀರನ್ನು ವ್ಯರ್ಥ ಮಾಡಲು ಬಯಸದಿದ್ದರೆ ಮತ್ತು RO ತ್ಯಾಜ್ಯ ನೀರನ್ನು ಬಳಸಲು ಬಯಸಿದರೆ ಅದಕ್ಕೆ ಹಲವು ಮಾರ್ಗಗಳಿವೆ. ಆ ನೀರನ್ನು ಸಂಗ್ರಹಿಸಿ ಅದನ್ನು ಸಸ್ಯಗಳ ಕುಂಡಗಳಿಗೆ ಹಾಕಬಹುದು. ಆ ನೀರನ್ನು ಮನೆ ಒರೆಸಲು ಅಥವಾ ಶೌಚಾಲಯವನ್ನು ಸ್ವಚ್ಛಗೊಳಿಸಲು ಬಳಸಬಹುದು. ಕಾರು, ಬೈಕ್ ಅಥವಾ ಇತರ ವಾಹನಗಳನ್ನು ತೊಳೆಯಲು ಸಹ ಆರ್‌ಓ ವೇಸ್ಟ್‌ ವಾಟರ್‌ ಅನ್ನು ಬಳಸಬಹುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...