
ಆದರೆ ಈಗೀಗ ತೆಲುವ ಮನೆಗಳು ಅಭಿವೃದ್ಧಿಗೊಂಡಿವೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಮುದ್ರದಲ್ಲೊಂದು ತೇಲುತ್ತಿರುವ ಮನೆ ಕಾಣಿಸಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಸಮುದ್ರದಲ್ಲಿ ಮಧ್ಯಮ ಗಾತ್ರದ ಹಡಗಿನ ಮೇಲೆ ಚಲಿಸುತ್ತಿದ್ದ ನಾವಿಕರ ಕಣ್ಣಿಗೆ ಈ ತೇಲುವ ಮನೆ ಬಿದ್ದಿದೆ.
ಎಕ್ಸ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಇದೊಂದು ಅತ್ಯಂತ ವಿಚಿತ್ರವಾದ ಸನ್ನಿವೇಶದಂತೆ ಗೋಚರವಾಗುತ್ತಿದೆ. ಒಂದು ಮನೆ ಸಮುದ್ರದಲ್ಲಿ ತೇಲಲು ಹೇಗೆ ಸಾಧ್ಯ..? ಸಮುದ್ರದಲ್ಲಿ ಮನೆ ಮುಳುಗಿ ಹೋಗಬಹುದು ಅಥವಾ ಅಲೆಗಳ ರಭಸಕ್ಕೆ ನಾಶವಾಗಿ ಹೋಗಬಹುದು. ಆದರೆ ಈ ಮನೆ ಅದೇಗೆ ತೇಲುತ್ತಿದೆ ಅಂತಾ ಜನರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ಅನೇಕರು ಈ ವಿಡಿಯೋಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಈಗಾಗಲೇ 2 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.