
ಬೆಂಗಳೂರು: ಅಕ್ಟೋಬರ್ 30 ರಂದು ಸಿಂದಗಿ, ಹಾನಗಲ್ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 20 ರಿಂದ 23 ರವರೆಗೆ ಯಡಿಯೂರಪ್ಪ 4 ದಿನ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ.
ಯಡಿಯೂರಪ್ಪನವರ ಉಪಚುನಾವಣಾ ಪ್ರಚಾರ ದಿನಾಂಕ ನಿಗದಿಯಾಗಿದೆ. ಅ. 20 ಮತ್ತು 21 ರಂದು ಸಿಂದಗಿ ಕ್ಷೇತ್ರದ ಪ್ರಚಾರ ನಡೆಸಲಿರುವ ಮಾಜಿ ಸಿಎಂ ಯಡಿಯೂರಪ್ಪ ಅ. 22, 23 ರಂದು ಹಾನಗಲ್ ನಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಎರಡು ಕ್ಷೇತ್ರಗಳಲ್ಲಿ ತಲಾ ಎರಡು ದಿನ ಯಡಿಯೂರಪ್ಪ ಮೊದಲ ಹಂತದ ಪ್ರಚಾರ ನಡೆಸಲಿದ್ದಾರೆ.