ಟ್ರೇಸಿ: ಮದುವೆ ಮನೆಗೆ ಇದ್ದಕ್ಕಿದ್ದ ಹಾಗೇ ಪೊಲೀಸರು ಬಂದರೆ ಏನಾಗುತ್ತದೆ? ಒಂದೇ ಸಲ ಎಲ್ಲರಿಗೂ ಆತಂಕ ಮೂಡುತ್ತದೆ ಅಲ್ಲವೇ? ಆದರೆ ಮದುವೆಗೆ ಬಂದ ಪೊಲೀಸ್ ಎಲ್ಲರೊಂದಿಗೆ ಸೇರಿ ನೃತ್ಯ ಮಾಡಿದರೆ?
ಹೌದು ಇದೇ ರೀತಿಯ ಅಪರೂಪದ ಘಟನೆ ಕ್ಯಾಲಿಫೋರ್ನಿಯಾದ ಟ್ರೇಸಿಯಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ನಡೆಯುತ್ತಿದ್ದ ಮಂಡಿವರ್ ತೂರ್, ರಾಮನ್ ಮದುವೆಯ ಸಮಾರಂಭದಲ್ಲಿ ನಡೆದಿದೆ.
ಮದುವೆ ಸಂಭ್ರಮ ಜೋರಾಗಿಯೇ ಇತ್ತು. ಈ ಶುಭಾರಂಭಕ್ಕೆ ಬಂದಿದ್ದ ಅತಿಥಿಗಳು ಜೋರಾದ ಸಂಗೀತ ಹಾಕಿಕೊಂಡು ನೃತ್ಯ ಮಾಡುತ್ತಿರುವ ಬಗ್ಗೆ ಸ್ಯಾನ್ ಜೊವಾಕ್ವಿನ್ ಕೌಂಟಿ ಶೆರಿಫ್ ಕಚೇರಿಗೆ ದೂರು ಹೋಗಿದೆ. ಇದರ ಬಗ್ಗೆ ಪರಿಶೀಲನೆಗಾಗಿ ಬಂದ ಪೊಲೀಸರು ಪಂಜಾಬಿ ಹಾಡಿಗೆ ನೃತ್ಯ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎದೆ ಝಲ್ಲೆನಿಸುವಂತಿದೆ ಚಿರತೆ ದಾಳಿಯ ವಿಡಿಯೋ
ಮದುವೆ ಸಮಾರಂಭವಾಗಿದ್ದರಿಂದ ನಾವು ಹಾಡುತ್ತಿದ್ದೆವು, ಕುಣಿದು ಕುಪ್ಪಳಿಸುತ್ತಿದ್ದೆವು, ಸಂಗೀತವನ್ನು ಜೋರಾಗಿಯೇ ಹಾಕಿ ಪಾರ್ಟಿಯ ಪ್ರತಿಕ್ಷಣವನ್ನು ಉತ್ಸಾಹದಿಂದ ಕಳೆಯುತ್ತಿದ್ದೆವು. ಆದರೆ ಅಲ್ಲಿಗೆ ಪೊಲೀಸರು ಆಗಮಿಸಿದರು. ಒಂದು ಕ್ಷಣ ದಿಕ್ಕು ತೋಚದಂತಾಗಿ ಪಾರ್ಟಿಯನ್ನು ನಿಲ್ಲಿಸುತ್ತಾರೆ ಎಂಬ ಭಯದಲ್ಲಿದ್ದೆವು. ಆದರೆ ಅವರಿಗೆ ನಮ್ಮೊಂದಿಗೆ ಕುಣಿಯಲು ಹೇಳಿದೆ. ನಾನು ಅವರಿಗೆ ಒಂದೆರಡು ನೃತ್ಯದ ಹೆಜ್ಜೆಯನ್ನು ಹೇಳಿಕೊಟ್ಟೆ ಎಂದು ಮನಪ್ರೀತ್ ಎಂಬುವರು ಹೇಳಿದರು.