ಉಚಿತ ವೈಫೈ ದುರುಪಯೋಗ ತಡೆಯಲು ಇದೊಂದು ಸಖತ್ ಪ್ಲಾನ್ 06-09-2021 12:24PM IST / No Comments / Posted In: Latest News, Live News, International ಕೆಫೆ ಹಾಗೂ ರೆಸ್ಟೋರೆಂಟ್ಗಳಲ್ಲಿ ಉಚಿತ ವೈಫೈ ಸೇವೆಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಇದು ಒಳ್ಳೆಯ ಮಾರ್ಕೆಟಿಂಗ್ ಪ್ಲಾನ್ ಕೂಡ ಹೌದು. ಒಳ್ಳೆಯ ಖಾದ್ಯವನ್ನು ಸೇವಿಸುತ್ತ ಇಂಟರ್ನೆಟ್ನಲ್ಲಿ ರೌಂಡ್ ಹಾಕೋಕೆ ಬಹುತೇಕರು ಮನಸ್ಸು ಮಾಡ್ತಾರೆ. ಈ ರೀತಿ ವೈಫೈ ಸೇವೆಗಳನ್ನು ಮುಕ್ತವಾಗಿ ನೀಡುವ ವೇಳೆಯಲ್ಲಿ ಪಾಸ್ವರ್ಡ್ಗಳನ್ನು ತುಂಬಾ ಸರಳವಾಗಿ ಇಡಲಾಗುತ್ತದೆ. ಇದರಿಂದ ಗ್ರಾಹಕರಿಗೂ ವೈಫೈ ಸೇವೆಯನ್ನು ಬಳಸಿಕೊಳ್ಳುವುದು ಸುಲಭ ಎನಿಸುತ್ತದೆ. ಆದರೆ ಅನೇಕರು ಈ ಉಚಿತ ವೈಫೈ ಸೌಲಭ್ಯ ಹೊಂದಿರುವ ರೆಸ್ಟೋರೆಂಟ್ಗಳ ಮುಂದೆ ಸುಮ್ಮನೇ ಕೂತು ಈ ಉಚಿತ ಸೌಲಭ್ಯದ ಲಾಭವನ್ನು ಪಡೆದುಬಿಡ್ತಾರೆ. ರೆಸ್ಟೋರೆಂಟ್ ಗಳಲ್ಲಿ ಏನನ್ನು ಆರ್ಡರ್ ಮಾಡದೇ ಉಚಿತವಾಗಿ ಲಾಭ ಪಡೆದರೆ ಇದರಿಂದ ರೆಸ್ಟೋರೆಂಟ್ ಗೂ ನಷ್ಟ. ಇದು ಖಂಡಿತವಾಗಿಯೂ ರೆಸ್ಟೋರೆಂಟ್ ಮಾಲೀಕನ ಕೋಪಕ್ಕೆ ಕಾರಣವಾಗುವ ವಿಷಯವಾಗಿದೆ. ಆದರೆ ಇಲ್ಲೊಂದು ಕೆಫೆ ಮಾತ್ರ ಈ ಸಮಸ್ಯೆಗೆ ಒಂದೊಳ್ಳೆ ಪರಿಹಾರವನ್ನು ಹುಡುಕಿರುವಂತೆ ಕಾಣುತ್ತಿದೆ. ಕಷ್ಟದ ಪಾಸ್ವರ್ಡ್ಗಳನ್ನು ಇಡುವ ಬದಲು ಟೆಕ್ಸಾಸ್ನ ಸ್ಯಾನ್ ಆ್ಯಂಟನಿಯೋದಲ್ಲಿರುವ ಯಾಯಾಸ್ ಥಾಯ್ ಒಂದು ಗಣಿತದ ಪ್ರಶ್ನೆಯೊಂದನ್ನು ಪಾಸ್ವರ್ಡ್ ಆಗಿ ಇಟ್ಟಿದೆ. ಈ ಗಣಿತದ ಸಮಸ್ಯೆಯನ್ನು ಬಿಡಿಸಿ ಸರಿಯಾದ ಉತ್ತರ ಹುಡುಕುವವರು ಮಾತ್ರ ವೈಫೈ ಪಾಸ್ವರ್ಡ್ ಅನ್ನು ಕಂಡುಕೊಳ್ಳಬಹುದಾಗಿದೆ. ಈ ಐಡಿಯಾವು 2016ರಿಂದಲೇ ಜಾರಿಯಲ್ಲಿದೆ. ಆದರೆ ರೆಡಿಟ್ನಲ್ಲಿ ಬಳಕೆದಾರರು ವಿಡಿಯೋವೊಂದು ಶೇರ್ ಮಾಡಿದ ಬಳಿಕ ಈ ವಿಚಾರ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಂದಹಾಗೆ ಈ ಗಣಿತದ ಸಮಸ್ಯೆಯನ್ನು ಬಿಡಿಸುವುದು ಕೂಡ ಅಷ್ಟೇನು ಸುಲಭವಾಗಿ ಇಲ್ವಂತೆ..! This is the Wifi password at a local Thai restaurant. I’m determined to join their network… https://t.co/F8t30HY6pt pic.twitter.com/jqHT6jRodY — OddStuffMagazine (@OddStuffMag) October 27, 2016