alex Certify ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಬಯಸುವವರಿಗೆ ಬಂಪರ್‌ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಬಯಸುವವರಿಗೆ ಬಂಪರ್‌ ಆಫರ್

ಭಾರತದಲ್ಲಿ ಕಾರು ಖರೀದಿ ಮಾಡಲು ಬ್ಯಾಂಕುಗಳು ಆಕರ್ಷಕ ಸಾಲಗಳನ್ನು ಕೊಡುತ್ತಿವೆ. ಹೊಸ ಕಾರೇ ಇರಲಿ ಅಥವಾ ಬಳಸಿದ ಕಾರೇ ಇರಲಿ ಬ್ಯಾಂಕುಗಳು ಸಾಲ ಕೊಡುತ್ತವೆ.

ಆದರೆ ಸೆಕೆಂಡ್‌ ಹ್ಯಾಂಡ್ ಕಾರು ಖರೀದಿ ಮೇಲೆ ಕೊಡುವ ಸಾಲಕ್ಕೆ ಬಡ್ಡಿ ವಿಪರೀತ ಇರುತ್ತದೆ.

ಆಟವಾಡುವಾಗಲೇ ಕಾದಿತ್ತು ದುರ್ವಿದಿ, ತೆಂಗಿನ ಮರ ಬಿದ್ದು ಬಾಲಕ ಸಾವು

ಆಕ್ಸಿಸ್‌ ಬ್ಯಾಂಕ್‌‌ ಹೊಸ ಕಾರಿಗೆ 8.65%-10.9% ದರದಲ್ಲಿ ಹೊಸ ಕಾರಿಗೆ ಸಾಲ ಕೊಡುತ್ತಿದ್ದರೆ, ಇದೇ ಬಳಸಿದ ಕಾರಿನ ಖರೀದಿಗೆ ಕೊಡುವ ಸಾಲದ ಮೇಲೆ 14.4%-16.4% ದರದಲ್ಲಿ ಸಾಲ ಕೊಡುತ್ತವೆ. ಎರಡೂ ನಿದರ್ಶನಗಳ ನಡುವಿನ ಅಂತರ 5%ನಷ್ಟಿದೆ.

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ: ಎಲ್ಲರಿಗೂ ನಿವೇಶನ, ಮನೆ ಒದಗಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ

ಆದರೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಬಳಸಿದ ಕಾರುಗಳ ಖರೀದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುತ್ತಿವೆ. ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿಗೆ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುತ್ತಿರುವ ಬ್ಯಾಂಕ್‌ಗಳ ಪಟ್ಟಿ ಇಂತಿದೆ:

– ಬಳಸಿದ ಕಾರುಗಳ ಖರೀದಿಗೆ ಕೆನರಾ ಬ್ಯಾಂಕ್ 7.3%-9.9% ದರದ ಬಡ್ಡಿಯಲ್ಲಿ ಸಾಲ ಕೊಡುತ್ತಿದೆ.

– ಬ್ಯಾಂಕ್ ಆಫ್ ಇಂಡಿಯಾ :- 7.35%-8.55%.

– ಯೂನಿಯನ್ ಬ್ಯಾಂಕ್ :- 8.9%-10.5%.

ಖಾಸಗಿ ಬ್ಯಾಂಕುಗಳಲ್ಲಿ:
– ಸೌತ್‌ ಇಂಡಿಯನ್ ಬ್ಯಾಂಕ್ :- 8.9%-10.5%.

– ಎಚ್‌ಡಿಎಫ್‌ಸಿ ಬ್ಯಾಂಕ್ :- 13.75%-16%.

– ಫೆಡರಲ್ ಬ್ಯಾಂಕ್ :- 13.8%.

ಬಹುತೇಕ ಪ್ರಸಂಗಗಳಲ್ಲಿ, ಬಳಸಿದ ಕಾರುಗಳ ಖರೀದಿಗೆ ಕೊಡುವ ಸಾಲವನ್ನು ಮರುಪಾವತಿ ಮಾಡಲು ಐದು ವರ್ಷಗಳ ಕಾಲಾವಕಾಶ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...