alex Certify ಆಭರಣ ಪ್ರಿಯರಿಗೆ ಬಿಗ್ ಶಾಕ್……!‌ ಮತ್ತಷ್ಟು ಏರಿಕೆಯಾಗಲಿದೆ ಚಿನ್ನದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಭರಣ ಪ್ರಿಯರಿಗೆ ಬಿಗ್ ಶಾಕ್……!‌ ಮತ್ತಷ್ಟು ಏರಿಕೆಯಾಗಲಿದೆ ಚಿನ್ನದ ಬೆಲೆ

ಆಭರಣ ಅಥವಾ ಚಿನ್ನ ಖರೀದಿ ಮಾಡುವ ಯೋಚನೆಯಲ್ಲಿದ್ರೆ ನಿಮಗೆಲ್ಲಾ ಬೇಸರದ ಸಂಗತಿಯಿದೆ. ಸದ್ಯದಲ್ಲೇ ಬಂಗಾರದ ಬೆಲೆ ಮತ್ತಷ್ಟು ಏರಿಕೆಯಾದ್ರೂ ಅಚ್ಚರಿಯಿಲ್ಲ. ಯಾಕಂದ್ರೆ ಭಾರತವು ಚಿನ್ನದ ಮೇಲಿನ ಮೂಲ ಆಮದು ಸುಂಕವನ್ನು ಶೇ.7.5 ರಿಂದ ಶೇ.12.5 ಕ್ಕೆ ಏರಿಕೆ ಮಾಡಿದೆ.

ಭಾರತದ ನಂತರ ಅಮೂಲ್ಯವಾದ ಲೋಹ ವಿಶ್ವದ ಎರಡನೇ ಅತಿದೊಡ್ಡ ಗ್ರಾಹಕನಿಗೆ ಚಿನ್ನದ ಒಳಹರಿವು ಕಡಿಮೆ ಮಾಡಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ವಹಿವಾಟು ಕೊರತೆಯಿಂದಾಗಿ ರೂಪಾಯಿ ಮೌಲ್ಯ ಕೂಡ ದಾಖಲೆಯ ಕುಸಿತ ಕಂಡಿದೆ.

ಕಳೆದ ವರ್ಷದ ಕೇಂದ್ರ ಬಜೆಟ್ ಪ್ರಸ್ತಾವನೆಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.12.5 ​​ರಿಂದ ಶೇ.7.5ಕ್ಕೆ ಕಡಿತಗೊಳಿಸಿದ್ದರು. ಆ ಸಮಯದಲ್ಲಿ ಚಿನ್ನದ ಮೇಲಿನ ಒಟ್ಟು ಲೆವಿ ಸೆಸ್, ಸರ್ಚಾರ್ಜ್ ಮತ್ತು ಜಿಎಸ್ಟಿ ಎಲ್ಲವೂ ಸೇರಿ ಶೇ.10.75 ಆಗಿತ್ತು.

ಈಗ ಆಮದು ಸುಂಕದಲ್ಲಿ ಶೇ.5 ರಷ್ಟು ಹೆಚ್ಚಳ ಮಾಡಿರುವುದರಿಂದ ಚಿನ್ನದ ಮೇಲಿನ ಒಟ್ಟು ತೆರಿಗೆ ಶೇ. 15.75 ರಷ್ಟಾಗುತ್ತದೆ. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಆಮದು ಸುಂಕ ಏರಿಕೆ ಮಾಡಿದ್ದರಿಂದ ಇದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ಸರ್ಕಾರದ ಈ ಕ್ರಮದಿಂದ ದೇಶೀಯ ಮಟ್ಟದಲ್ಲಿ ಚಿನ್ನ ದುಬಾರಿಯಾಗಲಿದೆ. ಆಮದನ್ನು ತಡೆಯಲು ಮತ್ತು ಆಮದು-ರಫ್ತು ಮಧ್ಯೆ ಸಮತೋಲನವನ್ನು ಕಾಯ್ದುಕೊಳ್ಳಲು ಸರ್ಕಾರವು ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗ್ತಿದೆ.

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಚಿನ್ನ ಖರೀದಿ ಕಡಿಮೆಯಾಗಿತ್ತು. ಆದ್ರೀಗ ಕೊರೊನಾ ಅಬ್ಬರ ತಗ್ಗಿರುವುದರಿಂದ ಮತ್ತೆ ಗ್ರಾಹಕರು ಭರಾಟೆಯಲ್ಲಿ ಬಂಗಾರ ಖರೀದಿ ಮಾಡ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಚಿನ್ನ ಆಮದು ಮಾಡಿಕೊಳ್ತಿರೋದ್ರಿಂದ ದೇಶೀಯ ಮಟ್ಟದಲ್ಲಿ ಚಿನ್ನ ದುಬಾರಿಯಾಗುತ್ತಿದೆ. ಪೆಟ್ರೋಲಿಯಂ ತೆರಿಗೆಯಿಂದ ಬೀಳುವ ಆದಾಯವನ್ನು ಸರಿದೂಗಿಸಲು ಮತ್ತು ಚಿನ್ನದ ಆಮದನ್ನು ನಿರುತ್ಸಾಹಗೊಳಿಸುವುದು ಸರ್ಕಾರದ ಉದ್ದೇಶ. ಇದು ಯುಎಸ್ ಡಾಲರ್ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಅಂತಿಮವಾಗಿ ಭಾರತೀಯ ರೂಪಾಯಿಯನ್ನು ದುರ್ಬಲಗೊಳಿಸುತ್ತದೆ.

ಭಾರತವು ಹೆಚ್ಚು ಕಚ್ಚಾ ವಸ್ತು ಮತ್ತು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಇದರಿಂದ ವಿದೇಶಿ ಮೀಸಲುಗಳನ್ನು ಕಳೆದುಕೊಳ್ಳುತ್ತದೆ ಮತ್ತು ಭೌತಿಕ ಚಿನ್ನದ ಬದಲಿಗೆ ಚಿನ್ನದ ಬಾಂಡ್‌ಗಳು, ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಗ್ರಾಹಕರನ್ನು ಪ್ರೋತ್ಸಾಹಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಮೇ ತಿಂಗಳಲ್ಲಿ ಒಟ್ಟು 107 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದ್ದು, ಜೂನ್‌ನಲ್ಲೂ ಆಮದು ಗಣನೀಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...