alex Certify ಒಂದೇ ಬಾರಿಗೆ ಇಡೀ ವಾರದ ತರಕಾರಿಗಳನ್ನು ಖರೀದಿಸುತ್ತಿದ್ದೀರಾ….? ಇದು ತುಂಬಾ ‘ಅಪಾಯಕಾರಿ’……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಬಾರಿಗೆ ಇಡೀ ವಾರದ ತರಕಾರಿಗಳನ್ನು ಖರೀದಿಸುತ್ತಿದ್ದೀರಾ….? ಇದು ತುಂಬಾ ‘ಅಪಾಯಕಾರಿ’……!

ತಾಜಾ ಸೊಪ್ಪು- ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಕಾಲೋಚಿತ ತರಕಾರಿಗಳನ್ನು ಸೇವಿಸುವುದರಿಂದ ದೇಹವು ಸಂಪೂರ್ಣವಾಗಿ ಆರೋಗ್ಯಕರವಾಗಿರುತ್ತದೆ. ಪ್ರತಿ ದಿನ ಕಲರ್‌ಫುಲ್‌ ತರಕಾರಿಗಳನ್ನು ಸೇವಿಸಿದರೆ ಅನೇಕ ಕಾಯಿಲೆಗಳಿಂದ ದೂರವಿರಬಹುದು. ಆದರೆ ತರಕಾರಿಗಳನ್ನು ಖರೀದಿಸುವ ಮುನ್ನ ಕೆಲವು ಎಚ್ಚರಿಕೆಗಳನ್ನು ವಹಿಸಬೇಕು. ಅವುಗಳನ್ನು ಸೇವನೆ ಮಾಡುವಾಗಲು ನಿಯಮಗಳನ್ನು ಅನುಸರಿಸಿದರೆ ಮಾತ್ರ ಸಂಪೂರ್ಣ ಪ್ರಯೋಜನ ಪಡೆಯಬಹುದು.

ತರಕಾರಿಗಳನ್ನು ತಿನ್ನುವ ವಿಧಾನ

ತರಕಾರಿಯಿಂದ ಮಾಡಿದ ಗ್ರೇವಿಯಲ್ಲಿ ಚಪಾತಿಯನ್ನು ಅದ್ದಿ ತಿನ್ನಬಾರದು. ಪ್ರತಿ ಬೈಟ್‌ನಲ್ಲಿ ತರಕಾರಿಗಳ ಪ್ರಮಾಣವು ಅನ್ನ ಅಥವಾ ಚಪಾತಿಗೆ ಹೋಲಿಸಿದರೆ ಸಮಾನವಾಗಿರಬೇಕು ಅಥವಾ ದ್ವಿಗುಣವಾಗಿರಬೇಕು.

ಒಂದು ಬೌಲ್ ಹಸಿ ತರಕಾರಿಗಳನ್ನು ಬೆಳಗ್ಗೆ ಮತ್ತು ಸಂಜೆ ತಿನ್ನಬೇಕು. ದೇಹವು ತರಕಾರಿಗಳಲ್ಲಿ ಇರುವ ವಿಟಮಿನ್ ಬಿ ಮತ್ತು ಸಿ ಅನ್ನು ಸಂಗ್ರಹಿಸಲು ಸಾಧ್ಯವಾಗದ ಕಾರಣ, ಅವು ಪ್ರತಿದಿನ ಬೇಕಾಗುತ್ತದೆ.

ಬೇಳೆಕಾಳುಗಳನ್ನು ಬೇಯಿಸುವ ಮೊದಲು ಸುಮಾರು 10-12 ಗಂಟೆಗಳ ಕಾಲ ನೆನೆಸಿಡಬೇಕು. ಈ ರೀತಿ ಮಾಡುವುದರಿಂದ ಕೆಲವು ಹಾನಿಕಾರಕ ಅಂಶಗಳನ್ನು ತೆಗೆದುಹಾಕಬಹುದು.

ಆಲೂಗಡ್ಡೆಯಲ್ಲಿ ಅಕ್ಕಿ ಮತ್ತು ರೊಟ್ಟಿಯಂತೆಯೇ ಸಾಕಷ್ಟು ಪ್ರಮಾಣದ ಪಿಷ್ಟವಿದೆ. ಆದ್ದರಿಂದ ಆಲೂಗಡ್ಡೆ ಸೇವನೆಯಿಂದ ದೇಹಕ್ಕೆ ಅನ್ನ ಮತ್ತು ಚಪಾತಿಯಲ್ಲಿ ದೊರೆತಷ್ಟೇ ಪೋಷಕಾಂಶಗಳು ಸಿಗುತ್ತವೆ.

ಎಲೆಕೋಸು, ಪಾಲಕ್‌ ಮುಂತಾದ ಸೊಪ್ಪುಗಳನ್ನು ಸಲಾಡ್‌ನಂತೆ ತಿನ್ನುವ ಮೊದಲು ಬೇರ್ಪಡಿಸಬೇಕು ಮತ್ತು ಚೆನ್ನಾಗಿ ತೊಳೆಯಬೇಕು. 5 ನಿಮಿಷಗಳ ಕಾಲ ಉಗುರುಬೆಚ್ಚಗಿನ ನೀರಿನಲ್ಲಿ ಮುಳುಗಿಸಿಟ್ಟು ನಂತರ ಬಳಸುವುದು ಸೂಕ್ತ.

ಯಾವುದೇ ಪಾರ್ಟಿ, ಫಂಕ್ಷನ್‌ಗಳಲ್ಲಿ ಸಲಾಡ್ ಅನ್ನು ತಿನ್ನಬೇಡಿ. ಸೊಪ್ಪು ಮತ್ತು ತರಕಾರಿಗಳನ್ನು ಸರಿಯಾಗಿ ತೊಳೆಯದಿದ್ದರೆ ಸೋಂಕಿನ ಅಪಾಯವಿರುತ್ತದೆ. ರಸ್ತೆಬದಿಯಲ್ಲಿ ಕತ್ತರಿಸಿ ಮಾರುತ್ತಿರುವ ಸಲಾಡ್ ಕೂಡ ತಿನ್ನಬೇಡಿ.

ಕಾಲೋಚಿತ ತರಕಾರಿಗಳನ್ನು ಏಕೆ ತಿನ್ನಬೇಕು?

ಋತುಮಾನದ ತರಕಾರಿಗಳನ್ನು ಬೆಳೆಯಲು ಕಡಿಮೆ ಕೀಟನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತದೆ. ಆದ್ದರಿಂದ ಅವುಗಳ ರುಚಿಯೂ ಉತ್ತಮವಾಗಿರುತ್ತದೆ.

ತಾಜಾ ತರಕಾರಿಗಳು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿನ ನಿರ್ಜಲೀಕರಣವನ್ನು ತಡೆಯುತ್ತದೆ.

ಹಸಿರು ತರಕಾರಿಗಳನ್ನು ತಿನ್ನುವುದರಿಂದ ರಕ್ತದ ಮಟ್ಟ ನಿರ್ವಹಣೆ, ದೃಷ್ಟಿ, ನರಗಳ ಆರೋಗ್ಯ, ಚರ್ಮ ಮತ್ತು ಮುಖದ ಹೊಳಪು, ತೂಕ ನಿಯಂತ್ರಣ ಎಲ್ಲವೂ ಸುಲಭವಾಗುತ್ತವೆ.

ಹಸಿರು ತರಕಾರಿಗಳನ್ನು ಹೇಗೆ ಬಳಸಬೇಕು?

ತರಕಾರಿಗಳಲ್ಲಿ ಕಂಡುಬರುವ ಪೋಷಕಾಂಶಗಳು ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸಿಗಬೇಕೆಂದರೆ ಅವುಗಳನ್ನು ಖರೀದಿಸುವ ಮತ್ತು ಬೇಯಿಸುವ ವಿಧಾನ ಸರಿಯಾಗಿರಬೇಕು. ಅನೇಕರು ವಾರಕ್ಕೊಮ್ಮೆ ಮಾರುಕಟ್ಟೆಗೆ ಹೋಗಿ ಇಡೀ ವಾರಕ್ಕೆ ಬೇಕಾದಷ್ಟು ತರಕಾರಿಗಳನ್ನು ಖರೀದಿಸುತ್ತಾರೆ. ಸುಲಭವಾಗಿ ಕೆಡದ ತರಕಾರಿಗಳಿಗೆ ಮಾತ್ರ ಈ ವಿಧಾನವು ಸೂಕ್ತವಾಗಿದೆ.

ತಾಜಾ ತರಕಾರಿಗಳನ್ನು ಮಾತ್ರ ಖರೀದಿಸಿ. ಒಣಗಿದ ತರಕಾರಿಗಳನ್ನು ಎಂದಿಗೂ ಖರೀದಿಸಬೇಡಿ. ಹಗಲಿನಲ್ಲಿ ತರಕಾರಿಗಳನ್ನು ಕೊಂಡುಕೊಳ್ಳಬೇಕೆ ಹೊರತೂ ರಾತ್ರಿಯಲ್ಲಲ್ಲ. ಏಕೆಂದರೆ ಕತ್ತಲೆಯಾದಾಗ ಕೃತಕ ಬೆಳಕಿನಲ್ಲಿ ತರಕಾರಿ ಫ್ರೆಶ್‌ ಇದೆಯೋ ಇಲ್ಲವೋ ಎಂಬುದು ನಮ್ಮ ಅರಿವಿಗೆ ಬರುವುದಿಲ್ಲ.

ತರಕಾರಿಗಳನ್ನು ಖರೀದಿಸಿದ ಬಳಿಕ ಅವುಗಳನ್ನು ಚೆನ್ನಾಗಿ ತೊಳೆಯಿರಿ. ತೊಳೆದ ನಂತರ ಅವುಗಳನ್ನು ದೊಡ್ಡ ಟಬ್ ಅಥವಾ ಪಾತ್ರೆಯಲ್ಲಿ ಹಾಕಿ ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಅಥವಾ ವಿನೆಗರ್ ಸೇರಿಸಿ ಮತ್ತು 10 ರಿಂದ 15 ನಿಮಿಷಗಳ ಕಾಲ ಇರಿಸಿ.

ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯುವುದರಿಂದ  ಕತ್ತರಿಸಿದ ನಂತರ ಅವುಗಳನ್ನು ತೊಳೆಯುವ ಅಗತ್ಯವಿಲ್ಲ. ತರಕಾರಿಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ಸುರಕ್ಷಿತವಾಗಿರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...