ಆನ್‌ಲೈನ್‌ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದಾಗ ಆಗಾಗ್ಗೆ ಮೋಸ ಆಗುತ್ತಿರುವ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ಏನೋ ಆರ್ಡರ್ ಮಾಡಿದರೆ ಇನ್ನೇನೋ ಬರುವುದು ಇದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಆರ್ಡರ್ ಮಾಡಿದಂತೆ ಟಿ.ವಿ. ಬಂದರೂ ಅದರ ಅಳತೆಯಲ್ಲಿ ಭಾರಿ ಮೋಸವಾಗಿರುವುದು ಬೆಳಕಿಗೆ ಬಂದಿದೆ.
ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ 50-ಇಂಚಿನ ಸ್ಯಾಮ್‌ಸಂಗ್ ಟಿವಿಯನ್ನು ಆರ್ಡರ್ ಮಾಡಿದ್ದರು. ಅಮೇಜಾನ್ನಲ್ಲಿ ಅವರು ಈ ಟಿ.ವಿಯ ಮೊತ್ತವನ್ನೂ ಪಾವತಿ ಮಾಡಿದ್ದರು. ಆದರೆ ಮನೆಗೆ ಬಂದಾಗ ಟಿ.ವಿ. ಚಿಕ್ಕದಂತೆ ತೋರಿತು. ಅನುಮಾನಗೊಂಡು ಅಳತೆ ಮಾಡಿದಾಗ ಅದು 44 ಇಂಚಿನದ್ದು ಎಂದು ತಿಳಿದಿದೆ.
‘ನಾನು “Samsung 8 ಸರಣಿ TU8000 50 ಅನ್ನು ಖರೀದಿಸಿದ್ದೆ. ಆದರೆ ಮನೆಗೆ ಬಂದಾಗ ಸಂದೇಹ ಬಂದು ಅಳತೆ ಮಾಡಿದಾಗ ನಾನು ಮೋಸ ಹೋಗಿರುವ ಬಗ್ಗೆ ತಿಳಿದೆ. ನನಗೆ ಸಂದೇಹ ಬರಲು ಇನ್ನೊಂದು ಕಾರಣವಿತ್ತು. ಅದೇನೆಂದರೆ ಟಿ.ವಿ. ಪ್ಯಾಕ್ ಮಾಡಿದ ಬಾಕ್ಸ್ 49 ಇಂಚಿನದ್ದಾಗಿತ್ತು. ಅದರಲ್ಲಿ 50 ಇಂಚಿನ ಟಿ.ವಿ. ಹಿಡಿಯಲು ಹೇಗೆ ಸಾಧ್ಯ? ಇದರಲ್ಲಿ ಭಾರಿ ಮೋಸ ನಡೆದಿದೆ ಎಂದು ಗ್ರಾಹಕ ಹೇಳಿದ್ದಾರೆ.