ಇತ್ತೀಚಿನ ದಿನಗಳಲ್ಲಿ ಬ್ಯುಸಿನೆಸ್ ನಲ್ಲಿ ಆಸಕ್ತಿ ತೋರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸಣ್ಣ ಹಾಗೂ ಮಧ್ಯಮ ವ್ಯವಹಾರ ಶುರು ಮಾಡಲು ಅನೇಕರು ಉತ್ಸುಕರಾಗಿದ್ದಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸುವ ಸಾಕಷ್ಟು ವ್ಯವಹಾರವಿದೆ. ಇದ್ರಲ್ಲಿ ಟೊಮೆಟೊ ಸಾಸ್ ವ್ಯಾಪಾರ ಕೂಡ ಒಂದು.
ಟೊಮೆಟೊ ಸಾಸ್ ಅಥವಾ ಟೊಮೆಟೊ ಕೆಚಪ್ ಗೆ ಎಲ್ಲ ಸಮಯದಲ್ಲೂ ಬೇಡಿಕೆಯಿದೆ. ಮನೆ ಹಾಗೂ ರೆಸ್ಟೋರೆಂಟ್ ಎರಡರಲ್ಲೂ ಇದ್ರ ಬಳಕೆ ಮಾಡಲಾಗುತ್ತದೆ. ಜನಪ್ರಿಯ ಬ್ರ್ಯಾಂಡ್‌ಗಳ ಜೊತೆಗೆ ಹಲವು ರೀತಿಯ ಸ್ಥಳೀಯ ಬ್ರ್ಯಾಂಡ್‌ಗಳು ಕೂಡ ಮಾರುಕಟ್ಟೆಯಲ್ಲಿವೆ. ಸ್ಥಳೀಯ ಬ್ರಾಂಡ್‌ನ ಗುಣಮಟ್ಟ ಉತ್ತಮವಾಗಿದ್ದರೆ ಬೇಡಿಕೆ ಹೆಚ್ಚಾಗುತ್ತದೆ.
ಈ ವ್ಯವಹಾರ ಶುರು ಮಾಡಲು ಸುಮಾರು 7 ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದ್ರೆ ನೀವು 2 ಲಕ್ಷ ಹೂಡಿಕೆ ಮಾಡಿದ್ರೆ ಸಾಕು. ಉಳಿದ ಹಣವನ್ನು ಸರ್ಕಾರ ಸಾಲದ ರೂಪದಲ್ಲಿ ನೀಡಲಿದೆ. ಮುದ್ರಾ ಯೋಜನೆಯಡಿ ನೀವು ಸಾಲ ಪಡೆಯಬಹುದು.
7.82 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ಅಂದಾಜು ವಾರ್ಷಿಕ ವಹಿವಾಟು 28.80 ಲಕ್ಷ ರೂಪಾಯಿಯಾಗುತ್ತದೆ, ವಾರ್ಷಿಕ 4.58 ಲಕ್ಷ ರೂಪಾಯಿ ನಿವ್ವಳ ಲಾಭದ ಲೆಕ್ಕ ಹಾಕಿದ್ರೆ ತಿಂಗಳಿಗೆ 40 ಸಾವಿರ ಗಳಿಸಬಹುದು.
ಮುದ್ರಾ ಯೋಜನೆಯಡಿ ಸಾಲ ಪಡೆಯಲು, ಬ್ಯಾಂಕ್ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಕೆಲ ದಾಖಲೆಗಳನ್ನು ನೀಡಬೇಕಾಗುತ್ತದೆ. ದಾಖಲೆ ಪರಿಶೀಲನೆ ನಡೆಸಿದ ನಂತ್ರ ಬ್ಯಾಂಕ್ ಸಾಲ ನೀಡಲಿದೆ. ನಿಮ್ಮ ಉತ್ಪನ್ನದ ಗುಣಮಟ್ಟ ನಿಮ್ಮ ಲಾಭವನ್ನು ನಿರ್ಧರಿಸುತ್ತದೆ.