alex Certify ಇಪಿಎಫ್‌ಒ ಹೂಡಿಕೆದಾರರಿಗೆ ಒಳ್ಳೆಯ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಪಿಎಫ್‌ಒ ಹೂಡಿಕೆದಾರರಿಗೆ ಒಳ್ಳೆಯ ಸುದ್ದಿ

ಇಪಿಎಫ್‌ಒ ಹೂಡಿಕೆದಾರರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಇಪಿಎಫ್ಒ ಠೇವಣಿಗಳ ಮೇಲಿನ ಬಡ್ಡಿದರ ಸ್ಥಿರವಾಗಿದೆ. 2020-21ರಲ್ಲಿ ಶೇಕಡಾ 8.5 ರಷ್ಟು ಬಡ್ಡಿ ಮುಂದುವರೆಯಲಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ಬೆಲೆ ಏರಿಕೆಯಿಂದ ತೊಂದರೆಗೀಡಾದ ನೌಕರರಿಗೆ ಇಪಿಎಫ್‌ಒ ಬಡ್ಡಿದರ ಕಡಿತಗೊಳಿಸಿಬಹುದೆಂದು ಅಂದಾಜಿಸಿದ್ದರು. ಆದ್ರೆ ಇಪಿಎಫ್ ಒ ಬಡ್ಡಿ ದರ ಸ್ಥಿರವಾಗಿದೆ. ಇಪಿಎಫ್‌ಒನ ಈ ನಿರ್ಧಾರ 60 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಲಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ 2020-21ನೇ ಸಾಲಿನ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ನಿಗದಿಪಡಿಸಲು ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಇಂದು ಶ್ರೀನಗರದಲ್ಲಿ ಸಭೆ ಸೇರಿತ್ತು. 2020-21ರ ಬಡ್ಡಿದರವನ್ನು ಘೋಷಿಸಲು ಈ ಸಭೆ ಕರೆಯಲಾಗಿತ್ತು. 2019-20ರ ಇಪಿಎಫ್‌ಒ ಬಡ್ಡಿದರಗಳು ಶೇಕಡಾ 8.5 ರಷ್ಟಿತ್ತು.

2012-13ರ ಆರ್ಥಿಕ ವರ್ಷದಲ್ಲಿ ಇಪಿಎಫ್ ಮೇಲಿನ ಬಡ್ಡಿದರವು ಶೇಕಡಾ 8.5 ರಷ್ಟಿತ್ತು. ಇಪಿಎಫ್‌ಒ ಕಳೆದ ಮಾರ್ಚ್‌ನಲ್ಲಿ ಬಡ್ಡಿದರವನ್ನು ಪರಿಷ್ಕರಿಸಿತ್ತು. ಇದಕ್ಕೂ ಮುನ್ನ 2018-19ರ ಆರ್ಥಿಕ ವರ್ಷಕ್ಕೆ ಇಪಿಎಫ್‌ಗೆ ಶೇಕಡಾ 8.65 ರಷ್ಟು ಬಡ್ಡಿ ನೀಡಲಾಗಿತ್ತು. 2017-18ರ ಆರ್ಥಿಕ ವರ್ಷದಲ್ಲಿ ಇಪಿಎಫ್‌ಗೆ ಶೇಕಡಾ 8.55 ರಷ್ಟು ಬಡ್ಡಿ ಪಾವತಿಸಲಾಗಿದೆ. 2015-16ರ ಆರ್ಥಿಕ ವರ್ಷದಲ್ಲಿ ಬಡ್ಡಿದರ ಶೇಕಡಾ 8.8 ರಷ್ಟಿತ್ತು. 2013-14ರ ಆರ್ಥಿಕ ವರ್ಷದಲ್ಲಿ ಇಪಿಎಫ್‌ಗೆ ಶೇಕಡಾ 8.75 ರಷ್ಟು ಬಡ್ಡಿ ಪಾವತಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...