ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಚಂಬಾದಿಂದ ಕಿಲ್ಲರ್ ರಸ್ತೆಯಲ್ಲಿ ಅಪಾಯಕಾರಿಯಾದ ಬಸ್ ಪ್ರಯಾಣದ ವಿಡಿಯೋ ಒಂದು ವೈರಲ್ ಆಗಿದ್ದು, ಉಸಿರು ಬಿಗಿ ಹಿಡಿದು ನೋಡುವಂತಿದೆ. ಈ ವಿಡಿಯೋ ನೋಡುವಾಗ ಮೈ ಝುಂ ಎನ್ನಿಸುವಂತಿದೆ.
ಹಿಮಾಚಲ ಪ್ರದೇಶದ ರಿಸ್ಕಿ ಚಂಬಾದಿಂದ ಕಿಲ್ಲರ್ ರಸ್ತೆಯಲ್ಲಿ ಈ ಬಸ್ ಸಾಗುತ್ತಿದೆ. ಈ ಮಾರ್ಗವನ್ನು ಭಾರತದಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಬಸ್ ಸಮುದ್ರ ಮಟ್ಟದಿಂದ 4,420 ಮೀಟರ್ (1,4500 ಅಡಿ) ಎತ್ತರದಲ್ಲಿರುವ ಸಾಚ್ ಲಾ ಮೂಲಕ ಹಾದುಹೋಗಬೇಕು. ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (ಎಚ್‌ಆರ್‌ಟಿಸಿ) ಬಸ್ ಚಂಬಾದಿಂದ ಕಿಲ್ಲರ್‌ಗೆ ಹೋಗುತ್ತಿದ್ದು, ಈ ಬಸ್ ಚಾಲಕನ ಧೈರ್ಯಕ್ಕೆ ಜತೆಗೆ ಇದರಲ್ಲಿ ಪ್ರಯಾಣಿಸಲು ಧೈರ್ಯ ತೋರುವ ಪ್ರಯಾಣಿಕರಿಗೆ ಸಲಾಂ ಎನ್ನಲೇಬೇಕು ಎನ್ನುವಂತಿದೆ.
ಸ್ವಲ್ಪವೇ ಆಯ ತಪ್ಪಿದರೂ ಬಸ್ನಲ್ಲಿದ್ದವರ ಮೃತದೇಹ ಕೂಡ ಸಿಗದಿರುವಷ್ಟು ಆಳವಾದ ಕಂದಕ ಇಲ್ಲಿದೆ. ಕಿರಿದಾದ ರಸ್ತೆಯಲ್ಲಿ ಬಸ್ ಸಂಚರಿಸುವುದನ್ನು ನೋಡಿದರೆ ಭಯ ಎನಿಸುವಂತಿದೆ. ಮಧ್ಯೆ ಜಲಪಾತವೂ ಹರಿಯುತ್ತಿದ್ದು, ಅದರ ನಡುವೆಯೂ ಬಸ್ ಚಲಿಸುತ್ತದೆ.
ನೀವು ಸವಾಲನ್ನು ಆನಂದಿಸುವವರಾಗಿದ್ದರೆ ಮತ್ತು ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳನ್ನು ಹುಡುಕುತ್ತಿದ್ದರೆ, ಇಲ್ಲಿಗೆ ಬನ್ನಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ. ಟ್ರಾವೆಲಿಂಗ್ ಭಾರತ್ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ನೋಡಿ ಜನರು ಬೆಚ್ಚಿಬೀಳೋದಂತೂ ಗ್ಯಾರೆಂಟಿ.
https://twitter.com/HarshN966/status/1588507152200904704?ref_src=twsrc%5Etfw%7Ctwcamp%5Etweetembed%7Ctwterm%5E1588507152200904704%7Ctwgr%5E947a9dff60b858d3083f17d6b61fdad5475914e0%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbus-travels-along-risky-chamba-to-killar-road-in-himachal-pradesh-in-thrilling-video-6318235.html