alex Certify ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿಸಿದ ಅಧಿಕಾರಿಗೆ ʼರೀ ಫಂಡ್‌ʼ ಆದ ಹಣವೆಷ್ಟು ಅಂತ ತಿಳಿದ್ರೆ ಶಾಕ್‌ ಆಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿಸಿದ ಅಧಿಕಾರಿಗೆ ʼರೀ ಫಂಡ್‌ʼ ಆದ ಹಣವೆಷ್ಟು ಅಂತ ತಿಳಿದ್ರೆ ಶಾಕ್‌ ಆಗ್ತೀರಾ….!

ಕೆಲವೊಮ್ಮೆ ನಮ್ಮ ಯೋಜನೆಯಲ್ಲಿನ ಹಠಾತ್ ಬದಲಾವಣೆಯಿಂದ ಬುಕ್ ಮಾಡಿದ ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಗುತ್ತದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ತುಂಬಾ ಬೇಸರದ ಸಂಗತಿಯೆಂದರೆ ಕ್ಯಾನ್ಸಲ್ ಮಾಡಿದಾಗ ಹಣ ಮರು ಪಾವತಿಯಾಗದಿರುವುದು. ಕೊನೇ ಪಕ್ಷ ಟಿಕೆಟ್ ನ ಅರ್ಧದಷ್ಟು ಮೊತ್ತವೂ ಸಿಗುವುದಿಲ್ಲ. ಇದೇ ರೀತಿ ಬುಕ್ ಮಾಡಿದ ವಿಮಾನ ಟಿಕೆಟ್ ರದ್ದು ಮಾಡಿದ ಸರ್ಕಾರಿ ಅಧಿಕಾರಿಗೆ ಮರುಪಾವತಿಯಾದ ಹಣದ ಮೊತ್ತ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರ.

ಬಿಹಾರ ಕೇಡರ್‌ನ ಐಎಎಸ್ ಅಧಿಕಾರಿ ರಾಹುಲ್ ಕುಮಾರ್ ಅವರು 13,820 ರೂ.ಗೆ ಬುಕ್ ಮಾಡಿದ್ದ ವಿಮಾನ ಟಿಕೆಟ್‌ಗೆ ಮರುಪಾವತಿಯಾದ ಹಣ ಕೇವಲ 20 ರೂಪಾಯಿ ಮಾತ್ರ.

ರಾಹುಲ್ ಕುಮಾರ್ ಅವರು ತಮ್ಮ ವಿಮಾನವನ್ನು ರದ್ದುಗೊಳಿಸಿದ ನಂತರ ಏರ್‌ಲೈನ್ ಕಳುಹಿಸಿದ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ 13,820 ರೂ. ಟಿಕೆಟ್ ದರದಲ್ಲಿ ವಿವಿಧ ಕಾರಣಗಳಿಗೆ 13,800 ರೂ. ಕಡಿತಗೊಂಡಿದ್ದು 20 ರೂಪಾಯಿಯನ್ನು ಮರುಪಾವತಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ರಾಹುಲ್ ಕುಮಾರ್ “ದಯವಿಟ್ಟು ನನ್ನ ಮರುಪಾವತಿಗಾಗಿ ಕೆಲವು ಉತ್ತಮ ಹೂಡಿಕೆ ಯೋಜನೆಗಳನ್ನು ಸೂಚಿಸಿ” ಎಂದು ವ್ಯಂಗ್ಯಾತ್ಮಕವಾಗಿ ಸಲಹೆ ಕೇಳಿದ್ದಾರೆ.

ಟ್ವೀಟ್ ಅನ್ನು ಜುಲೈ 11 ರಂದು ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಲೈಕ್ಸ್ ಗಳಿಸಿದೆ. ರಾಹುಲ್ ಕುಮಾರ್ ಪೋಸ್ಟ್ ಗೆ ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಪ್ರತಿಕ್ರಿಯಿಸಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡದೇ ಸುಮ್ಮನಿರಬೇಕು. ವಿಮಾನಯಾನ ಸಂಸ್ಥೆ ಅದನ್ನು ಮತ್ತೆ ಬೇರೆ ಪ್ರಯಾಣಿಕರಿಗೆ ಮಾರುವ ಬದಲು, ಆಸನ ವ್ಯರ್ಥವಾಗಲಿ ಎಂದೆಲ್ಲಾ ಕೆಲವರು ಸಲಹೆ ನೀಡಿದ್ದಾರೆ.

— Rahul Kumar (@Rahulkumar_IAS) July 10, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...