alex Certify ಬಿಜೆಪಿ ಕಚೇರಿ, ಅಮಿತ್ ಶಾ ಮನೆ ಮೇಲೆ ಬುಲ್ಡೋಜರ್ ಓಡಿಸಬೇಕು: ಆಪ್‌ ನಾಯಕಿ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಕಚೇರಿ, ಅಮಿತ್ ಶಾ ಮನೆ ಮೇಲೆ ಬುಲ್ಡೋಜರ್ ಓಡಿಸಬೇಕು: ಆಪ್‌ ನಾಯಕಿ ಹೇಳಿಕೆ

ನವದೆಹಲಿ: ಬಿಜೆಪಿ ಪ್ರಧಾನ ಕಚೇರಿ ಹಾಗೂ ಅಮಿತ್ ಶಾ ಅವರ ಮನೆಯ ಮೇಲೆ ಬುಲ್ಡೋಜರ್ ಓಡಿಸಿದರೆ ಈ ದೇಶವು ಕೋಮುಗಲಭೆ ಮತ್ತು ದೊಂಬಿಯಿಂದ ಮುಕ್ತವಾಗುತ್ತದೆ ಎಂದು ಆಮ್ ಆದ್ಮಿ ಪಕ್ಷ ಪ್ರತಿಕ್ರಿಯಿಸಿದೆ.

ದೆಹಲಿಯ ಜಹಾಂಗಿರ್‌ಪುರಿ ಪ್ರದೇಶದಲ್ಲಿ ಹಲವು ನಿರ್ಮಾಣಗಳನ್ನು ನೆಲಸಮಗೊಳಿಸಿರುವ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷವು, ಕಳೆದ ವಾರ ಹನುಮ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಕೋಮುಗಳ ಮಧ್ಯೆ ಕೇಸರಿ ಪಡೆ ಕಲಹವನ್ನು ಉಂಟುಮಾಡಿದೆ. ರಾಮನವಮಿ ಸಂದರ್ಭದಲ್ಲಿ ದೇಶದ ಹಲವು ಕಡೆಗಳಲ್ಲಿ ನಡೆದಿರುವ ಅಹಿತಕರ ಘಟನೆಗಳಿಗೂ ಬಿಜೆಪಿಯೇ ಕಾರಣ ಎಂದು ದೂರಿದೆ.

ಕೋಮುಗಲಭೆಗಳನ್ನು ಸೃಷ್ಟಿಸುವುದಕ್ಕಾಗಿಯೇ ಬಿಜೆಪಿಯು ಕಳೆದ ಎಂಟು ವರ್ಷಗಳಿಂದ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಯರನ್ನು “ಅಕ್ರಮವಾಗಿ” ದೇಶದ ಹಲವೆಡೆ ನೆಲೆಸುವಂತೆ ಮಾಡಿದೆ. ಸ್ಥಳೀಯಾಡಳಿತಗಳ ಕುಮ್ಮಕ್ಕಿನಿಂದ ರಾಷ್ಟ್ರ ರಾಜಧಾನಿಯಲ್ಲೂ 15 ವರ್ಷಗಳಿಂದ ಅಂಥವರಿಗೆ ಅವಕಾಶ ನೀಡುತ್ತಿದೆ. ಇಂತಹ ನಾಯಕರ ಮನೆಗಳನ್ನು ಮೊದಲು ನೆಲಸಮ ಮಾಡಬೇಕು ಎಂದು ಆಪ್ ಹೇಳಿದೆ.

Masked ʼಆಧಾರ್ʼ ಎಷ್ಟು ಸುರಕ್ಷಿತ….? ಡೌನ್ ಲೋಡ್ ಹೇಗೆ….? ಇಲ್ಲಿದೆ ಮಾಹಿತಿ

“ಬುಲ್ಡೋಜರ್ ಓಡಿಸಿ, ಅತಿಕ್ರಮಣಗಳನ್ನು ತೆರವು ಮಾಡಿದರೆ ಹಿಂಸೆ, ದೊಂಬಿ ಮತ್ತು ಗೂಂಡಾಗಿರಿ ನಿಲ್ಲುತ್ತದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ದೆಹಲಿ ಮಾತ್ರವಲ್ಲದೆ, ದೇಶದೆಲ್ಲೆಡೆ ಬಿಜೆಪಿಯೇ ಹಿಂಸೆ, ದೊಂಬಿ ಮತ್ತು ಗೂಂಡಾಗಿರಿಯನ್ನು ಮಾಡಿಸುತ್ತಿದೆ” ಎಂದು ವಿಡಿಯೋ ಸಂದೇಶವೊಂದರಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಆತಿಶಿ ಹೇಳಿದ್ದಾರೆ.

ಹನುಮಜಯಂತಿ, ರಾಮನವಮಿ ಆಚರಣೆ ಸಂದರ್ಭದಲ್ಲಿ ಇತ್ತೀಚೆಗೆ ದೇಶದೆಲ್ಲೆಡೆ ನಡೆದ ಕೋಮು ದಳ್ಳುರಿಯಲ್ಲಿ ಅಮಿತ್ ಶಾ ಮತ್ತು ಬಿಜೆಪಿಯ ಕೈವಾಡವಿದೆ. ಹೀಗಾಗಿ, “ಬಿಜೆಪಿ ಪ್ರಧಾನ ಕಚೇರಿ ಮತ್ತು ಅಮಿತ್ ಶಾ ಅವರ ನಿವಾಸದ ಮೇಲೆಯೇ ಬುಲ್ಡೋಜರ್ ಓಡಿಸಬೇಕು. ಇಷ್ಟಾದರೆ ದೇಶದ ಎಲ್ಲೂ ಕೋಮು ಸಂಘರ್ಷಗಳು ನಡೆಯುವುದಿಲ್ಲ” ಎಂದು ಕಲ್ಕಾಜಿ ಕ್ಷೇತ್ರದ ಶಾಸಕಿಯೂ ಆಗಿರುವ ಆತಿಶಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...