alex Certify ಪೇಪ‌ರ್‌ ಲೀಕ್‌ ಮಾಸ್ಟರ್‌ ಮೈಂಡ್‌ನ ಕೋಚಿಂಗ್ ಸೆಂಟರ್ ಧ್ವಂಸ; ರಾಜಸ್ತಾನ್‌ನಲ್ಲಿ ಬುಲ್ಡೋಜರ್ ನ್ಯಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೇಪ‌ರ್‌ ಲೀಕ್‌ ಮಾಸ್ಟರ್‌ ಮೈಂಡ್‌ನ ಕೋಚಿಂಗ್ ಸೆಂಟರ್ ಧ್ವಂಸ; ರಾಜಸ್ತಾನ್‌ನಲ್ಲಿ ಬುಲ್ಡೋಜರ್ ನ್ಯಾಯ

ಶಿಕ್ಷಕರ ನೇಮಕಾತಿ ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈ ಬಗ್ಗೆ ರಾಜಸ್ತಾನ್ ಸರ್ಕಾರ ಕಟ್ಟುನಿಟ್ಟಿನಕ್ರಮ ಕೈಗೊಂಡಿದೆ. ಈಗಾಗಲೇ ಈ ಪ್ರಕರಣದ ಹಿಂದಿರುವ ಮಾಸ್ಚರ್‌ಮೈಂಡ್‌ನ ಕೋಚಿಂಗ್ ಸೆಂಟರ್ ಅಧಿಗಮ್‌ನ್ನು ಬುಲ್ಡೋಜರ್‌ನಿಂದ ಧ್ವಂಸ ಮಾಡಿ ಹಾಕಲಾಗಿದೆ. ಈ ಕೋಚಿಂಗ್ ಸೆಂಟರ್ ಜೈಪುರದ ಗೋಪಾಲಪುರ ಬೈಪಾಸ್ ರಸ್ತೆಯ ಬಳಿ ಇರುವ ಐದು ಅಂತಸ್ಥಿನ ಕಟ್ಟಡವಾಗಿದ್ದು. ಜೈಪುರ ಅಭಿವೃದ್ಧಿ ಪ್ರಾಧಿಕಾರ ವಿಭಾಗವು ಇದನ್ನ ನೆಲಸಮಗೊಳಿಸಿದೆ.

ಇದೇ ಕೋಚಿಂಗ್ ಸೆಂಟರ್‌ನಿಂದ ಪೇಪರ್ ಲೀಕ್ ಆಗಿರುವುದಕ್ಕೆ ಕೆಲ ಸಾಕ್ಷಿಗಳು ಸಿಕ್ಕಿವೆ. ಇವುಗಳನ್ನೇ ಆಧಾರವಾಗಿಟ್ಟುಕೊಂಡು, ಪೇಪರ್ ಸೋರಿಕೆ ಪ್ರಮುಖ ಆರೋಪಿಗಳಾದ ಸುರೇಶ್ ಢಾಕಾ ಮತ್ತು ಭೂಪೇಂದ್ರ ಸರನ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಆದರೆ ಇವರಿಬ್ಬರೂ ಬಂಧನದ ಭೀತಿಯಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಇನ್ನೂ ತನಿಖೆ ವೇಳೆ ಸುರೇಶ್ ಢಾಕಾ ಪೇಪರ್ ಲೀಕ್ ಗ್ಯಾಂಗ್‌ನ ಕಿಂಗ್ ಪಿನ್ ಎಂಬ ಅಂಶ ಬೆಳಕಿಗೆ ಬಂದಿದೆ.

ರಾಜಸ್ತಾನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಆರ್‌ಪಿಎಸ್‌ಸಿ) ಶಿಕ್ಷಕರ ನೇಮಕಾತಿಗಾಗಿ ಸಾಮಾನ್ಯ ಜ್ಞಾನ ಪರೀಕ್ಷೆಯನ್ನ ಕಳೆದ ತಿಂಗಳು 24 ಡಿಸೆಂಬರ್ ನಡೆಸಲಾಗಿತ್ತು. ಆದರೆ ಪತ್ರಿಕೆ ಲೀಕ್ ಆಗಿದೆ ಅನ್ನೊ ವಿಷಯ ಗೊತ್ತಾಗಿದ್ದೇ ತಡ ಪರೀಕ್ಷೆಯನ್ನ ರದ್ದುಗೊಳಿಸಲಾಗಿತ್ತು. ಇನ್ನು ಕೋಚಿಂಗ್ ಸೆಂಟರ್‌ನ ಧ್ವಂಸದ ವೇಳೆ ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ಕೈ ಮೀರುವ ಹಾಗಿತ್ತು. ಆದ್ದರಿಂದ ಪೋಲೀಸರು 6 ಜನರನ್ನ ಬಂಧಿಸಿದ್ದರು.

ಗೆಹ್ಲೋಟ್‌ ಸರ್ಕಾರ ಈ ಹಿಂದೆ ಕೆಲ ನೇಮಕಾತಿ ವಿಚಾರಗಳಲ್ಲಿ ವಂಚನೆ ಮಾಡಿರುವ ಆರೋಪಗಳಿಂದ ಸುತ್ತುವರೆದಿದೆ. ಆದ್ದರಿಂದ ಈ ವಿಚಾರದಲ್ಲಿ ಗೆಹ್ಲೋಟ್ ಸರ್ಕಾರ ತನ್ನ ಖ್ಯಾತಿಯನ್ನ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿದೆ. ಇದೇ ಕಾರಣಕ್ಕೆ ಈಗ ಜೈಪುರದಲ್ಲಿ ಬುಲ್ಡೋಜರ್‌ ಮೂಲಕ ನ್ಯಾಯ ಕೊಡುವುದಕ್ಕೆ ಮುಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...