ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಡಿಐಎಎಲ್) ದೇಶದ ಪ್ರಮುಖ ನಿಲ್ದಾಣಗಳಲ್ಲಿ ಮೊದಲ ಸ್ಥಾನದಲ್ಲಿದೆ.
ವಿದೇಶಗಳಿಗೆ ತೆರಳುವ ಬಹುತೇಕ ವಿಮಾನಗಳಿಗೆ ಈ ಏರ್‍ಪೋರ್ಟ್ ಪ್ರಮುಖ ಕೇಂದ್ರವಾಗಿದೆ. ಆದರೆ ಇದರ ಸುತ್ತಲಿನ ಪ್ರದೇಶದಲ್ಲಿನ ವಸಂತ್ ಕುಂಜ್‍ನಲ್ಲಿರುವ ನಾಲ್ಕು ಅಪಾರ್ಟ್‍ಮೆಂಟ್‍ಗಳ ಎತ್ತರವು ವಿಮಾನ ಹಾರಾಟಕ್ಕೆ ಸ್ವಲ್ಪ ಕಿರಿಕಿರಿ ಉಂಟು ಮಾಡುತ್ತಿದೆಯಂತೆ.
ದೇಶೀಯ ವಿಮಾನಯಾನ ನಿರ್ದೇಶನಾಲಯವು 2016ರ ಸಮೀಕ್ಷೆಯಲ್ಲಿ ಈ ವಿಷಯವನ್ನು ಸರಕಾರದ ಗಮನಕ್ಕೆ ತಂದಿದೆ.
ನೀಲಸಾಗರದಲ್ಲಿ ಔಟಿಂಗ್ ಹೊರಟ ಸ್ಟಿಂಗ್ ರೇ: ವಿಡಿಯೋ ವೈರಲ್
ಅದರಂತೆ ಸದ್ಯ ಈ ಡಿ-6 ಸೊಸೈಟಿಯಲ್ಲಿರುವ ಅಪಾರ್ಟ್‍ಮೆಂಟ್‍ನ ಗಂಗಾ, ಯಮುನಾ, ನರ್ಮದಾ ಮತ್ತು ಸರಸ್ವತಿ ಹೆಸರಿನ ಬಹುಮಹಡಿ ಕಟ್ಟಡಗಳ ಮೇಲಿನ ಕೆಲವು ಅಂತಸ್ತುಗಳನ್ನು ಕೆಡವಬೇಕಿದೆ. ಮೇಲಿನ ಮಹಡಿಗಳ ಮಾಲೀಕರಿಗೆ ಸರಕಾರದ ಈ ಕ್ರಮದಿಂದ ದಿಕ್ಕೆಟ್ಟಂತಾಗಿದೆ. ಈಗಾಗಲೇ ದೆಹಲಿ ಅಭಿವೃದ್ಧಿ ಪ್ರಾಧಿಕಾರವು(ಡಿಡಿಎ) ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ನೋಟಿಸ್ ನೀಡಿದೆ.
ನಿವೃತ್ತ ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿಗಳು ಈ ಅಪಾರ್ಟ್‍ಮೆಂಟ್‍ಗಳಲ್ಲಿ ವಾಸವಿದ್ದಾರೆ. ಡಿಡಿಎ ನಿರಾಕ್ಷೇಪಣಾ ಪತ್ರ ಕೊಟ್ಟ ಮೇಲೆಯೇ ಈ ಕಟ್ಟಡಗಳಲ್ಲಿ ಮನೆಗಳನ್ನು ಖರೀದಿಸಿದ್ದೆವು. ಈಗ ಏಕಾಏಕಿ ಒಡೆದು ಹಾಕಿದರೆ ಹೇಗೆ ಎಂದು ಅವರೆಲ್ಲರೂ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ. ಈ ಬಿಕ್ಕಟ್ಟು ಕೋರ್ಟ್ ಮೆಟ್ಟಿಲೇರುವುದು ನಿಶ್ಚಿತ ಎನ್ನಲಾಗಿದೆ.