ಪ್ರತಿ ವರ್ಷದಂತೆ 2022-23ರ ಕೇಂದ್ರ ಬಜೆಟ್ ಸಹ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ವೇತನದಾರ ಮಧ್ಯಮವರ್ಗ ಕುಟುಂಬಗಳಿಂದ ಹಿಡಿದು, ಸ್ಟಾರ್ಟ್‌ಅಪ್‌ಗಳು ಮತ್ತು ಬ್ಯಾಂಕುಗಳವರೆಗೂ, ರೀಟೇಲರ್‌ಗಳಿಂದ ಫಿನ್ಟಕ್ ಸಂಸ್ಥೆಗಳವರೆಗೂ ದೇಶದ ಎಲ್ಲಾ ಕ್ಷೇತ್ರಗಳಿಗೂ ಬಜೆಟ್ ಮಂಡನೆಯ ಮೇಲೆ ಭಾರೀ ಆಕಾಂಕ್ಷೆಗಳಿವೆ.
ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಬೇಕಿದೆ. ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಫೋನ್‌ಗಳು ಭಾಗಗಳ ಆಮದಿನ ಮೇಲಿನ ಸುಂಕವನ್ನು ಪರಿಷ್ಕರಣೆ ಮಾಡುವ ಮೂಲಕ ದೇಸೀ ಉತ್ಪಾದನೆಗೆ ಉತ್ತೇಜನ ನೀಡುವ ಸಾಧ್ಯತೆ ಇದೆ.
ಬುಲ್ಲಿ ಬಾಯಿ ಪ್ರಕರಣ: ಬಂಧಿತ ನೀರಜ್ ಬಗ್ಗೆ ತಂದೆಯಿಂದಲೇ ಸ್ಫೋಟಕ ಮಾಹಿತಿ ಬಹಿರಂಗ
ಸರ್ಕಾರದ ಈ ನಡೆಯಿಂದ ಕೆಲ ನಿರ್ದಿಷ್ಟ ಕ್ಷೇತ್ರಗಳಿಗೆ ಅನುಕೂಲವಾದರೂ ಸಹ ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ ಉತ್ಪನ್ನಗಳ ರೀಟೇಲರ್‌ಗಳ ಬೇಡಿಕೆಗಳು ಬೇರೆ ಇನ್ನಷ್ಟು ಇವೆ.
“ಬಜೆಟ್ 2022-23ರಲ್ಲಿ ಎಲ್ಲಾ ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆ ಮಾಡಿ, ಅವುಗಳ ಕಚ್ಛಾ ವಸ್ತುಗಳ ಬೆಲೆಗಳನ್ನು ಇಳಿಸುವ ಮೂಲಕ ಇಂದಿನ ದಿನಮಾನದಲ್ಲಿ ಅತ್ಯಗತ್ಯಗಳು ಎಂದು ಪರಿಗಣಿತವಾದ ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೈಗೆಟುಕುವಂತೆ ಕಾಪಾಡಿಕೊಳ್ಳಲು ಸರ್ಕಾರ ಮುಂದಾಗಬೇಕು,” ಎಂದು ಸೂಪರ್ ಪ್ಲಾಸ್ಟ್ರಾನಿಕ್ಸ್ ಪ್ರೈ ಲಿ.ನ ಉಪಾಧ್ಯಕ್ಷೆ ಪಲ್ಲವಿ ಸಿಂಗ್ ತಿಳಿಸುತ್ತಾರೆ.
ಬಜೆಟ್ 2022ನಲ್ಲಿ ಟಿವಿಗಳ ಮೇಲಿನ ಜಿಎಸ್‌ಟಿ ಇಳಿಸುವುದು ಅಗತ್ಯವಾಗಿದೆ ಎನ್ನುವ ಪಲ್ಲವಿ, “ಸದ್ಯ 32 ಇಂಚಿನ ಟಿವಿಗಳ ಮೇಲೆ ಮಾತ್ರವೇ 18% ಜಿಎಸ್‌ಟಿ ಇದ್ದು, ಟಿವಿಗಳ ಬಹುದೊಡ್ಡ ವರ್ಗವು 28 ಪ್ರತಿಶತ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತದೆ. 43 ಇಂಚುಗಳವರೆಗಿನ ಟಿವಿಗಳ ಮೇಲಿನ ಜಿಎಸ್‌ಟಿ ದರಗಳನ್ನು 18 ಪ್ರತಿಶತಕ್ಕೆ ಇಳಿಕೆ ಮಾಡಿದರೆ ಗ್ರಾಹಕರಿಗೆ ದೊಡ್ಡ ನಿರಾಳತೆ ಸಿಕ್ಕಂತೆ,” ಎನ್ನುತ್ತಾರೆ.
“ಆತ್ಮ ನಿರ್ಭರ ಭಾರತ ಎಷ್ಟು ಮುಖ್ಯ ಎಂಬುದಕ್ಕೆ ಈಗ ನಾವು ಸಾಗುತ್ತಿರುವ ಬೇರೊಂದು ಅಲೆ ಸೂಚಕವಾಗಿದೆ. ದೇಶೀ ಉತ್ಪಾದನೆ ಹಾಗೂ ಎಂಎಸ್‌ಎಂಇಗಳಿಗೆ ಉತ್ತೇಜನ ನೀಡಲು ನಮಗೆ ಸ್ಥಿರವಾದ ಜಿಎಸ್‌ಟಿ ಸ್ಲಾಬ್ ಬೇಕಿದೆ. ಯಾವುದೇ ಉತ್ಪನ್ನವು 18 ಪ್ರತಿಶತದ ಸ್ಲಾಬ್‌ಗಿಂತ ಮೇಲಿರಬಾರದು ಹಾಗೂ ಕೊಳ್ಳುಬಾಕತನಕ್ಕೆ ಉತ್ತೇಜನ ಕೊಡುವ ಮೂಲಕ ಮಾರುಕಟ್ಟೆ ಭಾವನೆಗಳನ್ನು ಸುಧಾರಿಸಬೇಕು,” ಎನ್ನುತ್ತಾರೆ ಅವನೀತ್ ಸಿಂಗ್ ಮರ್ವಾ, ಸಿಇಓ, ಎಸ್‌ಪಿಪಿಎಲ್, ಬ್ಲೌಪಂಕ್ತ್ ಇಂಡಿಯಾದ ಶಾಖೆ.
ಹೀಗೆ ಮಾಡುವ ಮೂಲಕ ಭಾರತವು ಜಗತ್ತಿನ ಮೂರನೇ ಅತಿ ದೊಡ್ಡ ಟಿವಿ ಮಾರುಕಟ್ಟೆಯಾಗಬಹುದು ಎನ್ನುವ ಮರ್ವಾ, ಪ್ರತಿ ವರ್ಷ ಮಾರುಕಟ್ಟೆ ಗಾತ್ರವು 15 ಪ್ರತಿಶತದಷ್ಟು ಏರಿಕೆಯಾಗಿ, 16 ದಶಲಕ್ಷ ಘಟಕ ತಲುಪುವುದಾಗಿ ತಿಳಿಸಿದ್ದಾರೆ.