alex Certify BSY ಆಪ್ತ ಸಹಾಯಕನ ಮನೆ ಮೇಲೆ IT ದಾಳಿಗೆ ಕಾರಣವಾಯ್ತಾ ಆ ಪ್ರಕರಣ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSY ಆಪ್ತ ಸಹಾಯಕನ ಮನೆ ಮೇಲೆ IT ದಾಳಿಗೆ ಕಾರಣವಾಯ್ತಾ ಆ ಪ್ರಕರಣ…..?

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಉಮೇಶ್ ನಿವಾಸದ ಮೇಲೆ ನಡೆದ ಐಟಿ ದಾಳಿಗೆ ನೀರಾವರಿ ನಿಗಮದಲ್ಲಿ ನಡೆದ ಗೋಲ್ ಮಾಲ್ ಹಾಗೂ ಎರಡು ರಾಜ್ಯಗಳ ಕಾಂಟ್ರಾಕ್ಟರ್ಸ್ ನಡುವಿನ ಗಲಾಟೆಯೇ ಕಾರಣ ಎಂಬ ಮಾತು ಕೇಳಿಬರುತ್ತಿದೆ.

ವಿಮಾನದಲ್ಲಿ ಮಗು ಜನಿಸಿದ್ರೆ ಯಾವ ದೇಶದ ಪೌರತ್ವ ಸಿಗುತ್ತೆ ಗೊತ್ತಾ….? ನಿಮಗೆ ತಿಳಿದಿರಲಿ ಈ ಕುತೂಹಲಕರ ಮಾಹಿತಿ

ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಕರ್ನಾಟಕ ನಿರಾವರಿ ನಿಗಮದಲ್ಲಿ 20 ಸಾವಿರ ಕೋಟಿ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಬಿಜೆಪಿ ಎಂ ಎಲ್ ಸಿ ಹೆಚ್.ವಿಶ್ವನಾಥ್ ಸೇರಿದಂತೆ ವಿಪಕ್ಷ ನಾಯಕರು ಕೂಡ ನೀರಾವರಿ ಯೋಜನೆಯಲ್ಲಿ ಗೋಲ್ ಮಾಲ್ ನಡೆದಿದೆ. ಸಾವಿರಾರು ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದಿರುವ ಬಗ್ಗೆಯೂ ಆರೋಪಿಸಿದ್ದರು. ಈ ಕಾರಣದಿಂದಲೂ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆದಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

ಕುಣಿಯಲು ಹೋಗಿ ಕೈ ಮುರಿದುಕೊಂಡ ವಧು..! ಬರೋಬ್ಬರಿ 1.5 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ

ಅಲ್ಲದೇ ಇಂದಿನ ದಾಳಿಗೆ ಎರಡು ರಾಜ್ಯಗಳ ಕಾಂಟ್ರಾಕ್ಟರ್ಸ್ ಮಧ್ಯೆ ನಡೆದ ಗಲಾಟೆಯೂ ಪ್ರಮುಖ ಕಾರಣ ಎನ್ನಲಾಗಿದೆ. ನೀರಾವರಿ ಇಲಾಖೆಗೆ ಸಂಬಂಧಿಸಿದ ಕಾಂಟ್ರಾಕ್ಟ್ ಎರಡು ವರ್ಷಗಳಿಂದ ಆಂಧ್ರ ಮೂಲದ ಕಾಂಟ್ರಾಕ್ಟರ್ಸ್ ಪಾಲಾಗುತ್ತಿದ್ದು, ಇದರಿಂದ ಅಸಮಾಧಾನಗೊಂಡಿದ್ದ ಕರ್ನಾಟಕ ಮೂಲದ 8 ಕಾಂಟ್ರಾಕ್ಟರ್ಸ್ ಐಟಿಗೆ ದೂರು ನೀಡಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...