
ಮದುವೆಯ ನಂತರ ವಿದಾಯದ ಸಮಾರಂಭದಲ್ಲಿ ಮಗಳನ್ನು ಒಪ್ಪಿಸುವಾಗ ಎಲ್ಲರೂ ಭಾವುಕರಾಗುವುದು ಸಾಮಾನ್ಯ. ತವರನ್ನು ಬಿಟ್ಟು ವಧು ಹೊಸ ಜೀವನವನ್ನು ಪ್ರಾರಂಭಿಸಲು ಹೋಗುವ ಸಂದರ್ಭ ಇದು. ಆದ್ದರಿಂದ ಆಗಾಗ್ಗೆ ಕಣ್ಣೀರಿನ ಕೋಡಿ ಹರಿಯುತ್ತದೆ.
ಇಲ್ಲೊಂದು ವೈರಲ್ ವಿಡಿಯೋದಲ್ಲಿ ಸಹೋದರಿ ಅಳದಂತೆ ಮಾಡುವಲ್ಲಿ ಸಹೋದರರು ಪ್ರಯತ್ನ ಪಟ್ಟಿದ್ದಾರೆ. ಅದರಿಂದ ಆಕೆಯನ್ನು ನಗಿಸಲು ಸಂಗೀತದ ಮಾರ್ಗವನ್ನು ಕಂಡುಕೊಂಡಿದ್ದು, ಅದೀಗ ವೈರಲ್ ಆಗಿದೆ. ಅವರು ಸಾಂಪ್ರದಾಯಿಕ ಪ್ರೇಮಗೀತೆ ಕಬೂತರ್ ಜಾ ಜಾ ಜಾಗೆ ತಮಾಷೆಯ ನೃತ್ಯವನ್ನು ಪ್ರದರ್ಶಿಸಿದರು.
ಇನ್ಸ್ಟಾಗ್ರಾಮ್ ಬಳಕೆದಾರ ಇಂದರ್ಜೀತ್ ಕರ್ವಾಲ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. “ನಿಮ್ಮ ಸಹೋದರರು ನಿಮಗೆ ಶ್ರೀರಕ್ಷೆ ಎನ್ನುವ ಕ್ಯಾಪ್ಷನ್ ನೀಡಿದ್ದಾರೆ. ಸಹೋದರರು ಸಹೋದರಿಗೆ ವಿದಾಯದ ಸಮಯದಲ್ಲಿ ಕಣ್ಣೀರು ಹಾಕಲು ಬಿಡಲಿಲ್ಲ. ಆಕೆ ನಗುವಂತೆ ಮಾಡಿದರು ಎಂದು ಹೇಳಿದ್ದಾರೆ.
ಕಬೂತರ್ ಜಾ ಜಾ ಜಾ ಹಾಡು 1989 ರ ಮೈನೆ ಪ್ಯಾರ್ ಕಿಯಾ ಚಲನಚಿತ್ರದಿಂದ ಬಂದಿದೆ. ಲತಾ ಮಂಗೇಶ್ಕರ್ ಮತ್ತು ಎಸ್ಪಿ ಬಾಲಸುಬ್ರಮಣ್ಯಂ ಹಾಡಿದ್ದು, ಇದನ್ನು ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಮೇಲೆ ಚಿತ್ರಿಸಲಾಗಿದೆ. ಈ ವೈರಲ್ ವಿಡಿಯೋಗೆ ನೆಟ್ಟಿಗರು ಫಿದಾ ಮತ್ತು ಭಾವುಕರಾಗಿದ್ದು, ಇದ್ದರೆ ಇಂಥ ಸಹೋದರರು ಇರಬೇಕು ಎಂದಿದ್ದಾರೆ.
https://youtu.be/I8uQIY8UBZI