
ಸಂಸದರಿಗೆ ಹೆರಿಗೆ ರಜೆ ನೀಡಬೇಕೆಂದು ಈ ಹಿಂದೆ ಭಾರಿ ಪ್ರಚಾರ ಮಾಡಿದ್ದ ಕ್ರೀಸಿ, ಸಂಸತ್ತಿನಲ್ಲಿ ನಡೆದ ಚರ್ಚೆಯೊಂದರಲ್ಲಿ ತನ್ನ 3 ತಿಂಗಳ ಮಗುವನ್ನು ಹಿಡಿದುಕೊಂಡು ಮಾತನಾಡಿದ ನಂತರ ಅವರಿಗೆ ಎಚ್ಚರಿಕೆ ನೀಡಲಾಗಿದೆ.
ಮಗುವಿನ ಜೊತೆಯಲ್ಲಿದ್ದಾಗ ನೀವು ಚೇಂಬರ್‌ನಲ್ಲಿ ನಿಮ್ಮ ಆಸನದಲ್ಲಿ ಕುಳಿತುಕೊಳ್ಳಬಾರದು ಎಂದು ಲೇಬರ್ ಸಂಸದರು ಟ್ವೀಟ್ ಮಾಡಿದ್ದಾರೆ.
ಇನ್ನು ಮಗುವನ್ನು ಹೌಸ್ ಆಫ್ ಕಾಮನ್ಸ್‌ಗೆ ಕರೆತಂದಿದ್ದಕ್ಕಾಗಿ ಸಂಸದೀಯ ಅಧಿಕಾರಿಯೊಬ್ಬರು ಸಂಸದೆಯನ್ನು ಖಂಡಿಸಿದ ನಂತರ ಸುಧಾರಣೆಗೆ ಕ್ರೀಸಿ ಕರೆ ನೀಡಿದ್ದಾರೆ. ಮೂರು ತಿಂಗಳ ಮಗು ನಿಯಮಿತವಾಗಿ ಎದೆಹಾಲು ಕುಡಿಯುವುದರಿಂದ ಸಂಸದೆ ತನ್ನ ಮಗುವನ್ನು ಸಂಸತ್ತಿಗೆ ಕರೆದುಕೊಂಡು ಬಂದಿದ್ದಾರೆ.
ಸಂಸತ್ ಗೆ ಶಿಶುಗಳನ್ನು ನಿಷೇಧಿಸುವ ನಿರ್ಧಾರವು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಈ ಹಿಂದೆ, ಇತರೆ ಸಂಸದರು ತಮ್ಮ ಮಕ್ಕಳನ್ನು ವಾಗ್ದಂಡನೆಗೆ ಒಳಗಾಗದೆ ಸಂಸತ್ ಗೆ ಕರೆತಂದಿದ್ದರು.