![](https://kannadadunia.com/wp-content/uploads/2023/02/e0778f9b-846f-47f5-a6c1-9afecfb448e6.jpg)
ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಆಹಾರ ಪ್ರಿಯರಾಗಿದ್ದಾರೆ ಮತ್ತು ಸ್ಥಳೀಯ ಭಾರತೀಯ ಭಕ್ಷ್ಯಗಳನ್ನು ಆನಂದಿಸುವ ಕುರಿತು ಅವರ ಹಲವಾರು ಪೋಸ್ಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಅವರ ಇತ್ತೀಚಿನ ಟ್ವೀಟ್ ಅವರಿಗೆ ಭಾರತದ ಆಹಾರದ ಮೇಲೆ ಎಲ್ಲಿಲ್ಲದ ಪ್ರೀತಿಯಂತೆ. ಇದೇ ಕಾರಣಕ್ಕೆ ಇಲ್ಲಿಯ ಥಹರೇವಾರಿ ತಿನಿಸುಗಳ ಬಗ್ಗೆ ಅವರು ಬರೆದುಕೊಳ್ಳುತ್ತಲೇ ಇರುತ್ತಾರೆ. ಇದೀಗ ಬೆಂಗಳೂರಿನ ದೋಸೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಲ್ಲಿಸ್ ಅವರು, ಈ ಹಿಂದೆ ವಡಾ ಪಾವ್, ದೋಸೆ ಮತ್ತು ರೋಡಗುಲ್ಲಾ ಇತ್ಯಾದಿಗಳ ಬಗ್ಗೆ ಬರೆದುಕೊಂಡಿದ್ದರು. ಅದನ್ನು ಸವಿಯುವ ಫೋಟೋಗಳನ್ನು ಶೇರ್ಮಾಡಿಕೊಂಡು ಭಾರತೀಯ ಆಹಾರದ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದರು. ಇದೀಗ ಬೆಂಗಳೂರಿನ ದೋಸೆಯ ಕುರಿತು ಬರೆದಿದ್ದಾರೆ. ಗರಿಗರಿಯಾದ ದೋಸೆ, ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿ ಬಹಳ ವಿಶೇಷವಾಗಿತ್ತು. ಭಾರತದ ಆಹಾರ ಪದ್ಧತಿಗೆ ಮನಸೋತಿದ್ದೇನೆ ಎಂದು ಬರೆದುಕೊಂಡಿದ್ದಾರೆ.