alex Certify 30 ಕೆಜಿ ತೂಕದ ಬೃಹತ್ ಗೋಲ್ಡ್ ಫಿಷ್ ಹಿಡಿದ ಮೀನುಗಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30 ಕೆಜಿ ತೂಕದ ಬೃಹತ್ ಗೋಲ್ಡ್ ಫಿಷ್ ಹಿಡಿದ ಮೀನುಗಾರ…!

ಮನೆಗಳಲ್ಲಿ‌ ಮಳಿಗೆಗಳಲ್ಲಿ ಸಣ್ಣ ಬೌಲ್ ಮತ್ತು ಅಕ್ವೇರಿಯಂಗಳಲ್ಲಿ ಸಾಮಾನ್ಯವಾಗಿ ಕಿತ್ತಳೆ ಬಣ್ಣದ ಗೋಲ್ಡ್ ಫಿಶ್ ಅಲಂಕಾರಿಕ ಮೀನುಗಳ ಪೈಕಿ ಗಮನ ಸೆಳೆಯುತ್ತದೆ. ಹೀಗಾಗಿ ಚಿಕ್ಕ‌ಗೋಲ್ಡ್ ಫಿಶ್ ನೋಡಿರುತ್ತೀರಿ, ಭಾರಿ ಗಾತ್ರದ ಗೋಲ್ಡ್ ಫಿಶ್ ನೋಡುವುದು ಬಲು ಅಪರೂಪ.

ಇದೀಗ ಫ್ರಾನ್ಸ್‌ನ ಷಾಂಪೇನ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯ ಗಾಳಕ್ಕೆ ಅತಿದೊಡ್ಡ ಗೋಲ್ಡ್‌ಫಿಶ್ ಸೆರೆ ಸಿಕ್ಕಿದ್ದು, ಜಗತ್ತನ್ನು ಬೆರಗುಗೊಳಿಸಿದೆ. ‘ದಿ ಕ್ಯಾರಟ್’ ಎಂಬ ಅಡ್ಡಹೆಸರಿನ ದೈತ್ಯಾಕಾರದ ಮೀನು 67 ಪೌಂಡ್ (ಅಥವಾ 30 ಕೆಜಿ) ತೂಗುತ್ತಿತ್ತು.

ವೋರ್ಸೆಸ್ಟರ್‌ಶೈರ್‌ನ ಕಿಡ್ಡರ್‌ಮಿನ್‌ಸ್ಟರ್‌ನಿಂದ ಆಂಡಿ ಹ್ಯಾಕೆಟ್ ಎಂಬ ವ್ಯಕ್ತಿ ಮೀನು ಎಳೆದು ತರಲು 25 ನಿಮಿಷಗಳ ಕಾಲ ಬೇಕಾಯಿತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇದು ಲೆದರ್ ಕಾರ್ಪ್ ಮತ್ತು ಕೊಯಿಗಳ ಹೈಬ್ರಿಡ್ ಜಾತಿಯಾಗಿದೆ ಮತ್ತು ಇದುವರೆಗೆ ಹಿಡಿಯಲಾದ ಅದರ ಪ್ರಕಾರದ ಎರಡನೇ ದೊಡ್ಡದಾಗಿದೆ.

ಕ್ಯಾರೆಟ್ ಅಲ್ಲಿ ಇದೆ ಎಂದು ನನಗೆ ತಿಳಿದಿತ್ತು ಆದರೆ ನಾನು ಅದನ್ನು ಹಿಡಿಯುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ ಎಂದವರು ಹೇಳಿಕೊಂಡಿದ್ದಾರೆ.

ಅದನ್ನು ಮತ್ತೆ ನೀರಿಗೆ ಬಿಡುವ ಮೊದಲು ಅವರು ಫೋಟೋಗಳಿಗೆ ಪೋಸ್ ನೀಡಿದ್ದು, ಅದು ವೈರಲ್ ಆಗಿದೆ. ನೆಟ್ಟಿಗರು ಈ ಫೋಟೋ ನೋಡಿ ಆಶ್ಚರ್ಯಪಟ್ಟಿದ್ದಾರೆ.

Andy Hackette with 'The Carrot (Photo: Bluewater Lakes)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...