ಸ್ಪೇನ್ಗೆ ರಜೆ ಸಂದರ್ಭದಲ್ಲಿ ವಿಶ್ರಮಿಸಲು ತೆರಳಿದ್ದ ಬ್ರಿಟಿಷ್ ದಂಪತಿ ವಾಪನ್ ತಮ್ಮೂರಿಗೆ ಬಂದಾಗ ಶಾಕಿಂಗ್ ರೂಪದಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ.
ಗ್ಯಾರಿ ಥಾರ್ಸ್ಟನ್ ಮತ್ತು ಕ್ಲೇರ್ ಬಿಯರ್ಡ್ಸ್ 13 ದಿನ ಮುರ್ಸಿಯಾಕ್ಕೆ ಹೋಗಲು ಯೋಜಿಸಿದ್ದರು. ಆಗಸ್ಟ್ 3ರಂದು ವಿಮಾನ ಏರುವ ಮೊದಲು, ಅವರು ತಮ್ಮ ವೋಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ ಕಾರನ್ನು ಮ್ಯಾಂಚೆಸ್ಟರ್ ಏರ್ಪೋರ್ಟ್ನ ಮೀಟ್ ಮತ್ತು ಗ್ರೀಟ್ ಸೇವೆಯಲ್ಲಿ ಇರಿಸಿದರು. ಅವರು ಆಗಸ್ಟ್ 16ರಂದು ಹಿಂದಿರುಗಿದ ಬಳಿಕ ಪೊಲೀಸರು ವೇಗದ ಚಲಾವಣೆಗಾಗಿ ದಂಡ ಪತ್ರ ಹಿಡಿದು ನಿಂತಿದ್ದರು.
ಆಗಸ್ಟ್ 10ರ ಪತ್ರದಲ್ಲಿ, 30-ಮಿತಿ ವಲಯದಲ್ಲಿ ಅಲನ್ ಟ್ಯೂರಿಂಗ್ ವೇಯಲ್ಲಿ 55 ಕಿಮೀ ವೇಗದಲ್ಲಿ ಅವರ ಕಾರು ಚಲಾಯಿಸಿದ್ದು, ಪೊಲೀಸರ ಕ್ಯಾಮರಾಗೆ ಸೆರೆ ಸಿಕ್ಕಿದೆ. ಈ ಸಂಗತಿಯನ್ನು ಪೊಲೀಸರು ಆ ಜೋಡಿಗೆ ಹೇಳಿದ್ದಾರೆ.
ಇದರ ಜೊತೆಗೆ, ನಂಬರ್ ಪ್ಲೇಟ್ನೊಂದಿಗೆ ದಂಪತಿಯ ಬಿಳಿ ಗಾಲ್ಫ್ ಜಿಟಿಐ ಚಿತ್ರಗಳನ್ನು ಸಹ ಪತ್ರದೊಂದಿಗೆ ಲಗತ್ತಿಸಲಾಗಿದೆ. ಕಾರು ವೇಗವಾಗಿ ಸಂಚಾರವಾಗಿದ್ದನ್ನು ಅದರಲ್ಲಿ ನೋಡಬಹುದು. ಆಘಾತಕಾರಿ ಭಾಗವೆಂದರೆ ಘಟನೆಯು ಆಗಸ್ಟ್ 5ರಂದು ಸಂಭವಿಸಿದೆ, ಅಂದರೆ ಕಾರಿನ ಮಾಲೀಕರು ಆ ದಿನ ಆ ದೇಶದಲ್ಲೇ ಇರಲಿಲ್ಲ. ತಮ್ಮ ಕಾರನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಎರಡು ದಿನಗಳ ಬಳಿಕ ಈ ದಂಡ ಬಿದ್ದಿದೆ.
ದಂಪತಿಗಳು ಸ್ಪೇನ್ಗೆ ಹೊರಟ ತಕ್ಷಣ ಸೇವಾ ಸಿಬ್ಬಂದಿಯೊಬ್ಬರು ಕಾರನ್ನು ಕಾಂಪೌಂಡ್ಗೆ ಕೊಂಡೊಯ್ದಿದ್ದರು. ಆ ಕಾರು ಅಲ್ಲಿಯೇ ನಿಂತಿತ್ತು ಎಂದು ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡ ಹೇಳಿದ್ದಾರೆ.
ಕಾರು 5ನೇ ತಾರೀಖು ಹೋಗಿದ್ದೆಲ್ಲಿಗೆ ಎಂದು ತನಿಖೆ ಆರಂಭವಾಗಿದೆ. ಸ್ಥಳಿಯ ಮಾಧ್ಯಮಕ್ಕೆ ಪ್ರತಿಕ್ರಿಗೆ ನೀಡಿದ ಗ್ಯಾರಿ ಥಾರ್ನ್ಟನ್, ಆಗಸ್ಟ್ 3ರ ಬುಧವಾರ ರಾತ್ರಿ 10 ಗಂಟೆಗೆ ವಿಮಾನ ನಿಲ್ದಾಣದ ಟರ್ಮಿನಲ್ 3ಕ್ಕೆ ತಮ್ಮ ಕಾರನ್ನು ತರಲಾಗಿತ್ತು. ಆ ಕಾರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಾರೆ ಎಂದು ನನಗೆ ತಿಳಿದಿತ್ತು. ಕಾರನ್ನು ಒಳ್ಳೆ ರೀತಿಯಲ್ಲಿ ನೋಡಿಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬಯಸಿದ್ದೇವೆ. ಇದು ಕ್ರಿಮಿನಲ್ ಅಪರಾಧ ಮತ್ತು 30 ವಲಯದಲ್ಲಿ 55ಕಿಮೀ ವೇಗದಲ್ಲಿ ಹೋಗುವುದು ಅತ್ಯಂತ ಅಪಾಯಕಾರಿ ಎಂದು ಗ್ಯಾರಿ ಉಲ್ಲೇಖಿಸಿದ್ದಾರೆ.
ದಂಪತಿಗಳು ಈ ವಿಷಯದಲ್ಲಿ ತಮ್ಮ ಸ್ಪಷ್ಟಿಕರಣವನ್ನು ನೀಡಲು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರನ್ನು ಸಂಪರ್ಕಿಸಿದ್ದಾರೆ ಮತ್ತು ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.