ಬ್ರಿಟನ್‌ನಲ್ಲಿ ಆನ್ಲೈನ್ ಡೇಟಿಂಗ್ ಮಾಡುವವರು ಇನ್ನು ಮುಂದೆ ತಮ್ಮ ಪ್ರೊಫೈಲ್‌ಗಳ ಜೊತೆಗೆ ಕೋವಿಡ್ ಲಸಿಕೆ ಪಡೆದಿರುವ ಬ್ಯಾಡ್ಜ್ ಅನ್ನು ಹಾಕಿಕೊಳ್ಳಬಹುದಾಗಿದೆ.
ಟಿಂಡರ್, ಮ್ಯಾಚ್, ಹಿಂಜ್, ಬಂಬಲ್, ಬಡೋ, ಪ್ಲೆಂಟಿ ಆಫ್ ಫಿಶ್, ಅವರ್ ಟೈಮ್ ಹಾಗೂ ಮಝ್ಮಾಚ್‌ನಂಥ ಅಪ್ಲಿಕೇಶನ್‌ಗಳೆಲ್ಲಾ ಬ್ರಿಟನ್ ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ದೇಶದಲ್ಲಿ ಲಸಿಕೆ ಪಡೆದುಕೊಳ್ಳಲು ಪ್ರೇರೇಪಣೆ ಕೊಡಲೆಂದು ಈ ವ್ಯವಸ್ಥೆಯನ್ನು ತಮ್ಮ ಬಳಕೆದಾರರಿಗೆ ಕಲ್ಪಿಸಿವೆ.
ಬಹುಮುಖ್ಯ ಮಾಹಿತಿ: ಆದಾಯ ತೆರಿಗೆ ಹೊಸ ಪೋರ್ಟಲ್ ನಲ್ಲಿ ಶೀಘ್ರವೇ ಮಾಡಿ ಈ ಕೆಲಸ
ಕೆಲವೊಂದು ಅಪ್ಲಿಕೇಶನ್‌ಗಳು ಲಸಿಕೆ ಪಡೆದವರಿಗೆ ತಮ್ಮ ಪ್ರೀಮಿಯಂ ಫೀಚರ್‌ಗಳಾದ ಪ್ರೊಫೈಲ್ ಬೂಜ್, ವರ್ಚುವಲ್ ರೋಸ್ ಗಿವಿಂಗ್, ’ಸೂಪರ್ ಲೈಕ್ಸ್’ ಸೇರಿದಂತೆ ಅನೇಕ ಸಾಧ್ಯತೆಗಳಿಗೆ ಉಚಿತವಾದ ಅವಕಾಶ ಕೊಡಲು ಮುಂದಾಗಿವೆ.
ವೈದ್ಯನಂತೆ ವೇಷ ಧರಿಸಿ ಆಪರೇಷನ್ ಮಾಡಿದ ಸೆಕ್ಯೂರಿಟಿ ಗಾರ್ಡ್
ಅಮೆರಿಕ ಮೂಲದ ಬಂಬಲ್ ಒಂದು ಹೆಜ್ಜೆ ಮುಂದೆ ಹೋಗಿ, ಸಾಂಕ್ರಮಿಕದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಷ್ಟರ ಮಟ್ಟಿಗೆ ಜನ ಸಮರ್ಥರಿದ್ದಾರೆ ಎಂದು ಅರಿಯಲು ಅವಕಾಶ ಕೊಡಲೆಂದು, ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಇನ್ನಿತರ ಮನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಸ್ಪರರ ನಿಲುವುಗಳನ್ನು ಕೇಳಿಕೊಂಡು ಡೇಟಿಂಗ್ ಮಾಡಬೇಕೇ ಬೇಡವೇ ಎಂದು ನಿರ್ಧರಿಸುವ ಸಾಧ್ಯತೆಯನ್ನೂ ತಂದಿದೆ.