ಮಳೆ ಬರುತ್ತಿರುವಾಗ ಕರಂ ಕುರುಂ ತಿನ್ನಬೇಕೆನ್ನುವ ಬಯಕೆಯಾಗುತ್ತದೆ. ಮಳೆ ಜೊತೆ ಟೀ ಕುಡಿಯುತ್ತ ಬದನೆಕಾಯಿ ಪಕೋಡ ಸೇವಿಸಿದ್ರೆ ಅದ್ರ ಮಜವೇ ಬೇರೆ.
ಬದನೆಕಾಯಿ ಪಕೋಡ ಮಾಡಲು ಬೇಕಾಗುವ ಪದಾರ್ಥ :
ದೊಡ್ಡ ಬಿಳಿಬದನೆ
1/2 ಕಪ್ ಕಡಲೆ ಹಿಟ್ಟು
1 ಚಮಚ ಹಸಿರು ಕೊತ್ತಂಬರಿ
1/2 ಚಮಚ ಕೆಂಪು ಮೆಣಸಿನ ಪುಡಿ
¼ ಚಮಚ ಅರಿಶಿನ
1 ಚಿಟಕಿ ಅಜ್ವೈನ
ರುಚಿಗೆ ತಕ್ಕಷ್ಟು ಉಪ್ಪು
ರುಚಿಗೆ ತಕ್ಕಷ್ಟು ಚಾಟ್ ಮಸಾಲಾ
ಕರಿಯಲು ಎಣ್ಣೆ
ಬದನೆಕಾಯಿ ಪಕೋಡಾ ಮಾಡುವ ವಿಧಾನ :
ಒಂದು ಪಾತ್ರೆಗೆ ಕಡಲೆ ಹಿಟ್ಟು, ಅಜ್ವೈನ, ಉಪ್ಪು, ಕೆಂಪು ಮೆಣಸಿನಕಾಯಿ, ಅರಿಶಿನ, ಹಸಿರು ಕೊತ್ತಂಬರಿ ಮಿಶ್ರಣ ಮಾಡಿ, ಸ್ವಲ್ಪ ನೀರು ಬೆರೆಸಿ ದಪ್ಪ ಬ್ಯಾಟರ್ ತಯಾರಿಸಿ. ಬಿಳಿಬದನೆಯನ್ನು ದುಂಡಗೆ ಕತ್ತರಿಸಿಕೊಳ್ಳಿ.ಇದನ್ನು ಮಿಶ್ರಣದಲ್ಲಿ ಹಾಕಿ 5 ನಿಮಿಷ ನೆನೆಸಿಡಿ. ನಂತ್ರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗ್ತಿದ್ದಂತೆ ಮಿಶ್ರಣದಲ್ಲಿ ಅದ್ದಿರುವ ಬದನೆಯನ್ನು ಕರಿಯಿರಿ. ನಂತ್ರ ಚಾಟ್ ಮಸಾಲಾ ಹಾಕಿ ಸರ್ವ್ ಮಾಡಿ.