alex Certify 2 ಸಾವಿರ ರೂ.ಚೇಂಜ್​ ತನ್ನಿ ಎಂದರೆ ಕೇಕ್​ ಮೇಲೆ ಅದನ್ನೇ ಬರೆಯೋದಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ಸಾವಿರ ರೂ.ಚೇಂಜ್​ ತನ್ನಿ ಎಂದರೆ ಕೇಕ್​ ಮೇಲೆ ಅದನ್ನೇ ಬರೆಯೋದಾ……?

ಈಗ ಆಹಾರಗಳೆಲ್ಲವೂ ಆನ್​ಲೈನ್​ ಮಯ. ಆದರೆ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಆಹಾರವೊಂದರ ಕುತೂಹಲದ ವಿಷಯವನ್ನು ಪಾಕಿಸ್ತಾನದ ಟ್ವಿಟರ್​ ಬಳಕೆದಾರರು ಶೇರ್​ ಮಾಡಿಕೊಂಡಿದ್ದಾರೆ.
ಜಾವೈದ್ ಶಮಿ ಎಂಬ ಟ್ವಿಟ್ಟರ್ ಬಳಕೆದಾರರು ತಾವು ಆರ್ಡರ್ ಮಾಡಿದ ಕೇಕ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಬ್ರಿಂಗ್ ಚೇಂಜ್ ಆಫ್ 2000” ಎಂದು ಬರೆಯಲಾಗಿದೆ. ಅಂದರೆ ಎರಡು ಸಾವಿರ ರೂಪಾಯಿಗಳ ಚೇಂಜ್​ ತನ್ನಿ ಎಂದು.

ಇದು ಹೇಗೆ, ಏಕೆ ಎಂಬ ಬಗ್ಗೆಯೂ ಅವರು ವಿವರಿಸಿದ್ದಾರೆ. ಮಾರಾಟಗಾರನಿಗೆ 2000 ರೂಪಾಯಿಗಳ ಚೇಂಜ್​ ತನ್ನಿ ಎಂದು ಉರ್ದುವಿನಲ್ಲಿ ಹೇಳಿದ್ದೆ. ಆದರೆ ಅವರು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಕೇಕ್ ಮೇಲೆ ಅದನ್ನು ಬರೆದಿದ್ದಾರೆ ಎಂದು ಕೇಕ್​ ಚಿತ್ರ ಹಂಚಿಕೊಂಡಿದ್ದಾರೆ.

ಇದನ್ನು ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಆಸಕ್ತಿದಾಯಕ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ತಕ್ಷಣವೇ ವೈರಲ್ ಆದ 4 ಗಂಟೆಗಳಲ್ಲಿ, ಟ್ವೀಟ್ 60,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...