ಈಗ ಆಹಾರಗಳೆಲ್ಲವೂ ಆನ್ಲೈನ್ ಮಯ. ಆದರೆ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಆಹಾರವೊಂದರ ಕುತೂಹಲದ ವಿಷಯವನ್ನು ಪಾಕಿಸ್ತಾನದ ಟ್ವಿಟರ್ ಬಳಕೆದಾರರು ಶೇರ್ ಮಾಡಿಕೊಂಡಿದ್ದಾರೆ.
ಜಾವೈದ್ ಶಮಿ ಎಂಬ ಟ್ವಿಟ್ಟರ್ ಬಳಕೆದಾರರು ತಾವು ಆರ್ಡರ್ ಮಾಡಿದ ಕೇಕ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಬ್ರಿಂಗ್ ಚೇಂಜ್ ಆಫ್ 2000” ಎಂದು ಬರೆಯಲಾಗಿದೆ. ಅಂದರೆ ಎರಡು ಸಾವಿರ ರೂಪಾಯಿಗಳ ಚೇಂಜ್ ತನ್ನಿ ಎಂದು.
ಇದು ಹೇಗೆ, ಏಕೆ ಎಂಬ ಬಗ್ಗೆಯೂ ಅವರು ವಿವರಿಸಿದ್ದಾರೆ. ಮಾರಾಟಗಾರನಿಗೆ 2000 ರೂಪಾಯಿಗಳ ಚೇಂಜ್ ತನ್ನಿ ಎಂದು ಉರ್ದುವಿನಲ್ಲಿ ಹೇಳಿದ್ದೆ. ಆದರೆ ಅವರು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಕೇಕ್ ಮೇಲೆ ಅದನ್ನು ಬರೆದಿದ್ದಾರೆ ಎಂದು ಕೇಕ್ ಚಿತ್ರ ಹಂಚಿಕೊಂಡಿದ್ದಾರೆ.
ಇದನ್ನು ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಆಸಕ್ತಿದಾಯಕ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ತಕ್ಷಣವೇ ವೈರಲ್ ಆದ 4 ಗಂಟೆಗಳಲ್ಲಿ, ಟ್ವೀಟ್ 60,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.