alex Certify ಅಲ್ಪಾವಧಿಗೆ ಶತಕೋಟ್ಯಾಧೀಶರಾಗಿದ್ದರಿವರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಪಾವಧಿಗೆ ಶತಕೋಟ್ಯಾಧೀಶರಾಗಿದ್ದರಿವರು….!

ಅಮೆರಿಕದ ಲೌಸಿಯಾನಾ ರಾಜ್ಯದ ಕುಟುಂಬವೊಂದು ತನ್ನ ಬ್ಯಾಂಕ್ ಖಾತೆಯಲ್ಲಿ $50 ಶತಕೋಟಿ ಜಮೆಯಾಗಿದೆ ಎಂದು ತಿಳಿದು ಸಂತಸದ ಶಾಕ್‌ಗೆ ಒಳಗಾಗಿತ್ತು.

ರಿಯಲ್‌ ಎಸ್ಟೇಟ್ ಏಜೆಂಟ್ ಡೆರ‍್ರೆನ್ ಜೇಮ್ಸ್ ಹಾಗೂ ಆತನ ಮಡದಿ ಬೇಟನ್ ರೋಗ್ ಹೀಗೆ ಅಲ್ಪಾವಧಿಯ ಕೋಟ್ಯಾಧೀಶ ದಂಪತಿಯಾಗಿದ್ದರು. ಕೂಡಲೇ ಬ್ಯಾಂಕ್‌ಗೆ ಕರೆ ಮಾಡಿದ್ದ ಜೇಮ್ಸ್‌, ಇಷ್ಟೊಂದು ದುಡ್ಡು ಅದು ಹೇಗೆ ಬಂತು ಎಂದು ವಿಚಾರಿಸಿದ್ದಾರೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷದ ಕಾರಣ ಹೀಗೆ ಇಬ್ಬರ ಖಾತೆಯಲ್ಲಿ ಜಮೆಯಾಗಿದ್ದ ದುಡ್ಡನ್ನು ಕೆಲ ಸಮಯದ ಬಳಿಕ ಬ್ಯಾಂಕ್ ಹಿಂಪಡೆದುಕೊಂಡಿದೆ.

ಇಂಥದ್ದೇ ಘಟನೆಯೊಂದರಲ್ಲಿ, ಅಮೆರಿಕದ ರುತ್‌ ಬಲ್ಲೂನ್ ಹೆಸರಿನ ಮಹಿಳೆಯೊಬ್ಬರ ಬ್ಯಾಂಕ್ ಖಾತೆಗೆ ತಾಂತ್ರಿಕ ದೋಷದ ಕಾರಣದಿಂದ ಕೆಲ ನಿಮಿಷಗಳ ಮಟ್ಟಿಗೆ $37 ದಶಲಕ್ಷ ಜಮೆಯಾಗಿತ್ತು. ಕೆಲ ಹೊತ್ತಿನ ಬಳಿಕ ಆ ದುಡ್ಡನ್ನು ಬ್ಯಾಂಕ್ ಮರಳಿ ಪಡೆದುಕೊಂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...