alex Certify ವಯಸ್ಕರ ಸೈಟ್​ಗೆ ಡೈರೆಕ್ಟ್​ ಆದ ವಿವಾಹ ಆಮಂತ್ರಣ; ವಧು ಮಾಡಿದ ಯಡವಟ್ಟಿನಿಂದ ಅತಿಥಿಗಳು ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಕರ ಸೈಟ್​ಗೆ ಡೈರೆಕ್ಟ್​ ಆದ ವಿವಾಹ ಆಮಂತ್ರಣ; ವಧು ಮಾಡಿದ ಯಡವಟ್ಟಿನಿಂದ ಅತಿಥಿಗಳು ಕಂಗಾಲು

ಮದುವೆಯ ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿರುತ್ತದೆ, ವಧು – ವರರು ಹಾಗೂ ಕುಟುಂಬ ಸದಸ್ಯರಿಗೆ ಒಂದಷ್ಟು ಒತ್ತಡವೂ ಇರುತ್ತದೆ. ಹೀಗಾಗಿ ಸಣ್ಣಪುಟ್ಟ ತಪ್ಪುಗಳು ಸಹಜ. ಆದರೆ, ಇಲ್ಲೊಂದು ಮಹಾ ಪ್ರಮಾದವಾಗಿದೆ. ಈ ತಪ್ಪು ಮಾಡಿಕೊಂಡಿದ್ದು ಮದುವೆಯಾಗುವ ವಧು ಎಂಬುದು ಅಚ್ಚರಿ ಸಂಗತಿ.

ವಧು ತನ್ನ ಮದುವೆಯ ಆಮಂತ್ರಣದಲ್ಲಾದ ಅಭಾಸವನ್ನು ಟಿಕ್​ಟಾಕ್​ನಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾಳೆ.

ಕುಟುಂಬದವರು, ಸ್ನೇಹಿತರು, ಅತಿಥಿಗಳಿಗೆ ಕಳಿಸಲಾದ ಮದುವೆಯ ಆಮಂತ್ರಣದಲ್ಲಿ ಸೇರಿಸಲಾದ ಯುಆರ್​ಎಲ್​ ವಯಸ್ಕ ಚಿತ್ರಗಳಿರುವ ಸೈಟ್​ನದ್ದಾಗಿತ್ತು.

ಆಕೆ ತನ್ನ ಅಧಿಕೃತ ವಿವಾಹ ವೆಬ್​ಸೈಟ್​ಗೆ ಬದಲಾಗಿ ತನ್ನ ಅತಿಥಿಗಳನ್ನು ಎಕ್ಸ್​-ರೇಟೆಡ್​ ಪ್ಲಾಟ್​ಫಾರ್ಮ್‌ಗೆ ನಿರ್ದೇಶಿಸಿದ್ದಳು. ಆಕೆ ತಾನು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದು, ಈ ಪೋಸ್ಟ್​ ಸುಮಾರು 200 ಕೆ ವೀಕ್ಷಣೆಗಳನ್ನು ಗಳಿಸಿದೆ.

ಘಟನೆಯು ಕೆಲವು ಕುತೂಹಲಕಾರಿ ಚರ್ಚೆಗೆ ಕಾರಣವಾಯಿತು. ಕೊನೆಗೆ ಆಕೆ ಕುಟುಂಬ ಸದಸ್ಯರು ಸ್ನೇಹಿತರಲ್ಲಿ ಕ್ಷಮೆ ಯಾಚಿಸಿ ವಿಷಯವನ್ನು ಕೊನೆಗೊಳಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...