alex Certify ಸಾರಾ ಅಲಿ ಖಾನ್‍ರ ಚಕಾ ಚಕ್ ಹಾಡಿಗೆ ಸ್ಟೆಪ್ಸ್ ಹಾಕಿದ ವಧು…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರಾ ಅಲಿ ಖಾನ್‍ರ ಚಕಾ ಚಕ್ ಹಾಡಿಗೆ ಸ್ಟೆಪ್ಸ್ ಹಾಕಿದ ವಧು…! ವಿಡಿಯೋ ವೈರಲ್

Viral Video: Bride and Her Sister Dance on Sara Ali Khan's Chaka Chak. Watchಮದುವೆ ಸಮಾರಂಭದಲ್ಲಿ ಸುಂದರವಾಗಿ ಕುಣಿದಾಡುತ್ತಿರುವ ಈ ಇಬ್ಬರು ಯುವತಿಯರನ್ನು ಕಂಡು ಇಂಟರ್ನೆಟ್ ಬೆರಗಾಗಿದೆ. ಇತ್ತೀಚಿನ ದಿನಗಳಲ್ಲಿ ವಿವಾಹ ಕಾರ್ಯಕ್ರಮಗಳಲ್ಲಿ ಹಾಡು, ನೃತ್ಯವಿಲ್ಲದೆ ಅದು ಅಪೂರ್ಣವೆಂದೆನಿಸುವಂತಾಗಿಬಿಟ್ಟಿದೆ. ಇದೀಗ ವಧು ಹಾಗೂ ಆಕೆಯ ಸಹೋದರಿ, ನಟಿ ಸಾರಾ ಅಲಿ ಖಾನ್ ಅವರ ಅಭಿನಯದ ಚಕಾ ಚಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಈ ಸುಂದರ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ದಿ ವೆಡ್ಡಿಂಗ್ ಮಿನಿಸ್ಟ್ರಿ ಎಂಬ ಪೇಜ್ ಪೋಸ್ಟ್ ಮಾಡಿದ್ದು, ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ವಧು ಮತ್ತು ಆಕೆಯ ಸಹೋದರಿ ಸುಂದರವಾದ ಸಿಲ್ವರ್ ಬಣ್ಣ ಮತ್ತು ಗೋಲ್ಡನ್ ಬಣ್ಣದ ಲೆಹೆಂಗಾವನ್ನು ಧರಿಸಿದ್ದಾರೆ. ಇತ್ತೀಚಿನ ಬಾಲಿವುಡ್ ಹಿಟ್ ಅತ್ರಾಂಗಿ ರೇ ಸಿನಿಮಾದ ಚಕಾ ಚಕ್ ಹಾಡಿಗೆ ಇವರಿಬ್ಬರು ವೇದಿಕೆಯಲ್ಲಿ ಕುಣಿದಿದ್ದು, ಧೂಳೆಬ್ಬಿಸಿದ್ದಾರೆ.

ಇನ್ನು ಇತ್ತೀಚೆಗೆ ತಾರೆ ರೂಪಾಲಿ ಗಂಗೂಲಿ, ಸಾರಾ ಅಲಿ ಖಾನ್ ಜೊತೆ ಚಕಾ ಚಕ್‌ಗೆ ನೃತ್ಯ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ಒಂದು ವಾರದ ಹಿಂದೆ ರೂಪಾಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದು 1.3 ಮಿಲಿಯನ್ ಲೈಕ್‌ಗಳೊಂದಿಗೆ ವೈರಲ್ ಆಗಿದೆ. ರೂಪಾಲಿ ಗಂಗೂಲಿ ಅವರ ಸಹೋದರ ವಿಜಯ್ ಗಂಗೂಲಿ ಚಕಾ ಚಕ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...