ಮದುವೆಯೊಂದರ ರಿಸೆಪ್ಷನ್‌ಗೆ ಹೋಗಲಾರದ ಕಾರಣಕ್ಕೆ ಅತಿಥಿಯೊಬ್ಬರು ಕನಸಲ್ಲೂ ಊಹಿಸಿರದ ಪರಿಣಾಮ ಎದುರಿಸಬೇಕಾಗಿ ಬಂದಿದೆ.
ಮದುವೆಯ ಡಿನ್ನರ್ ಪಾರ್ಟಿಗೆ ಬರದೇ ಇದ್ದ ಕಾರಣ ಮದುಮಗಳು ಈ ಅತಿಥಿಗೆ ಅವರ ಪಾಲಿನ ಭೋಜನಕ್ಕೆ ಆಗುವ ಖರ್ಚನ್ನು ಕಟ್ಟಿಕೊಡುವಂತೆ ಕೋರಿ $240 (17,700 ರೂಪಾಯಿ) ಬಿಲ್ ಒಂದನ್ನು ಕಳುಹಿಸಿಕೊಟ್ಟಿದ್ದಾರೆ. ತಲಾ $120ರಂತೆ ಇಬ್ಬರಿಗೆ ಡಿನ್ನರ್ ವ್ಯವಸ್ಥೆಗೆ ಇಷ್ಟು ಖರ್ಚಾಗಿದೆ ಎಂದು ಇನ್‌ವಾಯ್ಸ್‌ನಲ್ಲಿ ತೋರಲಾಗಿದೆ.
ಹುಮಾಯುನ್ ಪುರದ ಬದಲು ʼಹನುಮಾನ್ ಪುರʼ ಬೇಕೆಂದ ಬಿಜೆಪಿ ಕೌನ್ಸಿಲರ್ ಆಗ್ರಹ
“ನೀವು ಬರುವುದಿಲ್ಲ ಎಂದು ನಮಗೆ ಮೊದಲೇ ಫೋನ್ ಮಾಡಿ ತಿಳಿಸದೇ ಇದ್ದ ಕಾರಣ, ನಿಮ್ಮ ಸೀಟುಗಳನ್ನು ಮುಂಗಡ ಬುಕ್ ಮಾಡಿದ್ದಕ್ಕಾಗಿ ನೀವು ನಮಗೆ ಈ ಮೊತ್ತ ಪಾವತಿಸಬೇಕು” ಎಂದು ಕೂಲ್ ಆಗಿ ಬಿಲ್‌ನಲ್ಲಿ ಬರೆಯಲಾಗಿದೆ.
“ನೀವು ಪೇಪಾಲ್ ಅಥವಾ ಜ಼ೆಲ್ಲೆ ಮೂಲಕ ಪಾವತಿ ಮಾಡಬಹುದು. ಯಾವ ಹಾದಿಯಲ್ಲಿ ಪಾವತಿ ಮಾಡಲು ಇಚ್ಚಿಸುವಿರಿ ಎಂದು ತಿಳಿಸಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಧನ್ಯವಾದ !” ಎಂದು ಬಿಲ್‌ನಲ್ಲಿ ಸೇರಿಸಲಾಗಿದೆ.