alex Certify ಮದುವೆ ಮನೆಯಲ್ಲಿ ವಧು ಮುಖಕ್ಕೆ ಕೇಕ್​ ಮೆತ್ತಿದ ವರ; ಮುನಿಸಿಕೊಂಡ ಯುವತಿಯಿಂದ ವಿವಾಹ ಕ್ಯಾನ್ಸಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯಲ್ಲಿ ವಧು ಮುಖಕ್ಕೆ ಕೇಕ್​ ಮೆತ್ತಿದ ವರ; ಮುನಿಸಿಕೊಂಡ ಯುವತಿಯಿಂದ ವಿವಾಹ ಕ್ಯಾನ್ಸಲ್

ಕ್ರಿಶ್ಚಿಯನ್​ ಸಂಪ್ರದಾಯದಲ್ಲಿ ಮದುವೆಯಾಗುತ್ತಿದ್ದಂತೆಯೇ ಕೇಕ್​ ಕಟ್​ ಮಾಡುವ ಕ್ರಮವಿದೆ. ಆದರೆ ಎಲ್ಲಾ ವಧು‌ – ವರರು ಈ ಕೇಕ್​ನ್ನು ತಿನ್ನೋದಕ್ಕೆ ಬಳಕೆ ಮಾಡೋದಿಲ್ಲ. ಅನೇಕರು ಇದನ್ನು ಪರಸ್ಪರ ಮುಖಕ್ಕೆ ಹಚ್ಚಲು ಬಳಸುವುದೇ ಜಾಸ್ತಿ.

ಆದರೆ ಇಲ್ಲೊಬ್ಬ ವಧುಗೆ ಇದು ಇಷ್ಟವಾದಂತೆ ಕಾಣ್ತಿಲ್ಲ. ಮದುವೆ ಕಾರ್ಯಕ್ರಮದಲ್ಲಿ ವರ ತನ್ನ ಮುಖಕ್ಕೆ ಕೇಕ್​ ಮೆತ್ತಿದ್ದಕ್ಕೆ ಕೋಪಗೊಂಡ ವಧು, ವರನನ್ನೇ ತ್ಯಜಿಸಿದ್ದಾಳೆ. ರೆಡ್ಡಿಟ್​ನಲ್ಲಿ ಇಂತಹದ್ದೊಂದು ಪೋಸ್ಟ್​ ಸಖತ್​ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ವಧುವು ತನ್ನ ಜೀವನದ ಕತೆಯನ್ನು ಹೇಳಿಕೊಳ್ಳುತ್ತಾಳೆ. ಈಕೆಗೆ 17 ವರ್ಷ ಪ್ರಾಯವಿದ್ದಾಗ ಆಕೆಯ ತಾಯಿಯು ಆಕೆಯ ಮುಖವನ್ನು ಬರ್ತಡೇ ಕೇಕ್​ ಮೇಲೆ ಹಾಕಲು ಯತ್ನಿಸಿದ್ದರು. ಇದು ಅವರ ಮನೆಯ ಸಂಪ್ರದಾಯ ಕೂಡ ಆಗಿತ್ತು.

ಆದರೆ ಆಕೆಗೆ ತನ್ನ ಕೂದಲು ಹಾಳು ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಹಾಗೆಯೇ ಮೇಕಪ್​ ಕೂಡ. ಹೀಗಾಗಿ ತಾಯಿಯ ಬಳಿ ಆ ರೀತಿ ಮಾಡಬೇಡ ಎಂದು ಕೇಳಿಕೊಂಡಿದ್ದಳು. ಆದರೆ ತಾಯಿಯು ಮಗಳ ಮಾತನ್ನು ಕೇಳಿರಲಿಲ್ಲ.

ಅದೇ ರೀತಿ ಮದುವೆ ಮನೆಯಲ್ಲಿಯೂ ನಾನು ನನ್ನ ಮುಖಕ್ಕೆ ಕೇಕ್​ ಮೆತ್ತಬೇಡಿ ಎಂದು ಪತಿಯಲ್ಲಿ ಕೇಳಿಕೊಂಡಿದ್ದೆ. ಒಂದು ವೇಳೆ ನನ್ನಿಷ್ಟದ ವಿರುದ್ಧವಾಗಿ ಕೇಕ್​ ಮುಖಕ್ಕೆ ಮೆತ್ತಿದರೆ ನಿಮ್ಮನ್ನೇ ನಾನು ತ್ಯಜಿಸುತ್ತೇನೆ ಎಂದು ಮೊದಲೇ ವಾರ್ನಿಂಗ್ ನೀಡಿದ್ದೆ. ನನ್ನ ಪತಿ ನನ್ನ ವಿರುದ್ಧವಾಗಿ ನಡೆದುಕೊಂಡರು. ಹೀಗಾಗಿ ನಾನು ಏನು ಹೇಳಿದ್ದೆನೋ ಅದನ್ನೇ ಮಾಡಿದ್ದೇನೆ ಎಂದು ವಧು ಹೇಳಿದ್ದಾರೆ.

ವಧುವಿಗೆ ಕೇಕ್​ ಮೆತ್ತುತ್ತಿದ್ದಂತೆಯೇ ವಧುವಿನ ಮನೆಯವರು ಹಾಗೂ ವರನ ಕಡೆಯವರು ಗೊಳ್​ ಅಂತಾ ನಕ್ಕಿದ್ದಾರೆ. ಕೂಡಲೇ ವಧು ಸ್ಟೇಜ್​ನಿಂದ ಕೆಳಕ್ಕೆ ಇಳಿದು ಊಬರ್​ ಕ್ಯಾಬ್ ಹತ್ತಿ ಮದುವೆ ಸ್ಥಳದಿಂದ ತೆರಳಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...