ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆಯಾಗುತ್ತಿದ್ದಂತೆಯೇ ಕೇಕ್ ಕಟ್ ಮಾಡುವ ಕ್ರಮವಿದೆ. ಆದರೆ ಎಲ್ಲಾ ವಧು – ವರರು ಈ ಕೇಕ್ನ್ನು ತಿನ್ನೋದಕ್ಕೆ ಬಳಕೆ ಮಾಡೋದಿಲ್ಲ. ಅನೇಕರು ಇದನ್ನು ಪರಸ್ಪರ ಮುಖಕ್ಕೆ ಹಚ್ಚಲು ಬಳಸುವುದೇ ಜಾಸ್ತಿ.
ಆದರೆ ಇಲ್ಲೊಬ್ಬ ವಧುಗೆ ಇದು ಇಷ್ಟವಾದಂತೆ ಕಾಣ್ತಿಲ್ಲ. ಮದುವೆ ಕಾರ್ಯಕ್ರಮದಲ್ಲಿ ವರ ತನ್ನ ಮುಖಕ್ಕೆ ಕೇಕ್ ಮೆತ್ತಿದ್ದಕ್ಕೆ ಕೋಪಗೊಂಡ ವಧು, ವರನನ್ನೇ ತ್ಯಜಿಸಿದ್ದಾಳೆ. ರೆಡ್ಡಿಟ್ನಲ್ಲಿ ಇಂತಹದ್ದೊಂದು ಪೋಸ್ಟ್ ಸಖತ್ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ವಧುವು ತನ್ನ ಜೀವನದ ಕತೆಯನ್ನು ಹೇಳಿಕೊಳ್ಳುತ್ತಾಳೆ. ಈಕೆಗೆ 17 ವರ್ಷ ಪ್ರಾಯವಿದ್ದಾಗ ಆಕೆಯ ತಾಯಿಯು ಆಕೆಯ ಮುಖವನ್ನು ಬರ್ತಡೇ ಕೇಕ್ ಮೇಲೆ ಹಾಕಲು ಯತ್ನಿಸಿದ್ದರು. ಇದು ಅವರ ಮನೆಯ ಸಂಪ್ರದಾಯ ಕೂಡ ಆಗಿತ್ತು.
ಆದರೆ ಆಕೆಗೆ ತನ್ನ ಕೂದಲು ಹಾಳು ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಹಾಗೆಯೇ ಮೇಕಪ್ ಕೂಡ. ಹೀಗಾಗಿ ತಾಯಿಯ ಬಳಿ ಆ ರೀತಿ ಮಾಡಬೇಡ ಎಂದು ಕೇಳಿಕೊಂಡಿದ್ದಳು. ಆದರೆ ತಾಯಿಯು ಮಗಳ ಮಾತನ್ನು ಕೇಳಿರಲಿಲ್ಲ.
ಅದೇ ರೀತಿ ಮದುವೆ ಮನೆಯಲ್ಲಿಯೂ ನಾನು ನನ್ನ ಮುಖಕ್ಕೆ ಕೇಕ್ ಮೆತ್ತಬೇಡಿ ಎಂದು ಪತಿಯಲ್ಲಿ ಕೇಳಿಕೊಂಡಿದ್ದೆ. ಒಂದು ವೇಳೆ ನನ್ನಿಷ್ಟದ ವಿರುದ್ಧವಾಗಿ ಕೇಕ್ ಮುಖಕ್ಕೆ ಮೆತ್ತಿದರೆ ನಿಮ್ಮನ್ನೇ ನಾನು ತ್ಯಜಿಸುತ್ತೇನೆ ಎಂದು ಮೊದಲೇ ವಾರ್ನಿಂಗ್ ನೀಡಿದ್ದೆ. ನನ್ನ ಪತಿ ನನ್ನ ವಿರುದ್ಧವಾಗಿ ನಡೆದುಕೊಂಡರು. ಹೀಗಾಗಿ ನಾನು ಏನು ಹೇಳಿದ್ದೆನೋ ಅದನ್ನೇ ಮಾಡಿದ್ದೇನೆ ಎಂದು ವಧು ಹೇಳಿದ್ದಾರೆ.
ವಧುವಿಗೆ ಕೇಕ್ ಮೆತ್ತುತ್ತಿದ್ದಂತೆಯೇ ವಧುವಿನ ಮನೆಯವರು ಹಾಗೂ ವರನ ಕಡೆಯವರು ಗೊಳ್ ಅಂತಾ ನಕ್ಕಿದ್ದಾರೆ. ಕೂಡಲೇ ವಧು ಸ್ಟೇಜ್ನಿಂದ ಕೆಳಕ್ಕೆ ಇಳಿದು ಊಬರ್ ಕ್ಯಾಬ್ ಹತ್ತಿ ಮದುವೆ ಸ್ಥಳದಿಂದ ತೆರಳಿದ್ದಾಳೆ ಎನ್ನಲಾಗಿದೆ.