ಮದುವೆ, ಹನಿಮೂನ್ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಅದ್ಧೂರಿಯಾಗಿ ಮದುವೆ ನಡೆಯಬೇಕು. ಸುಂದರ ಸ್ಥಳಕ್ಕೆ ಹನಿಮೂನ್ ಗೆ ಹೋಗಬೇಕೆಂದು ಬಯಸುತ್ತಾರೆ. ಆದ್ರೆ ಹನಿಮೂನ್ ಗೆ ವಿಶೇಷ ಪ್ಲಾನ್ ಮಾಡಿದ್ದ ಹುಡುಗಿಯೊಬ್ಬಳು ಮಾಡಿದ ಕೆಲಸ ಅಚ್ಚರಿ ಮೂಡಿಸುವಂತಿದೆ.
ಸಾಮಾನ್ಯವಾಗಿ, ಹುಡುಗರಿಗಿಂತ ಹುಡುಗಿಯರು ಮದುವೆ ಬಗ್ಗೆ ಹೆಚ್ಚು ಕನಸು ಕಾಣ್ತಾರೆ. ದುಬಾರಿ ವೆಡ್ಡಿಂಗ್ ಡ್ರೆಸ್ ಧರಿಸಿ ಮಿಂಚಬೇಕೆಂದು ಬಯಸ್ತಾರೆ. ಇಡೀ ಬಳಗವನ್ನು ಕರೆದು, ಮದುಯಾಗಲು ಇಷ್ಟಪಡ್ತಾರೆ. ಆದ್ರೆ ಲಂಡನ್ ನ ಯೂಲಿಯಾ ಇದಕ್ಕೆ ಭಿನ್ನವಾಗಿದ್ದಾಳೆ. ಯೂಲಿಯಾ, ಮದುವೆಗಿಂತ ಹನಿಮೂನ್ ಗೆ ಹೆಚ್ಚು ಮಾನ್ಯತೆ ನೀಡಿದ್ದಳು.
ಮಲಗುವ ಮುನ್ನ ಮೇಕಪ್ ತೆಗೆಯಲು ಆಲಸ್ಯ ಮಾಡಿದ್ರೆ ಏನಾಗುತ್ತೆ ಗೊತ್ತಾ….?
ಯೂಲಿಯಾ, ಮದುವೆಯಲ್ಲಿ ಹಣ ಖರ್ಚು ಮಾಡದೆ, ಆ ಹಣದಲ್ಲಿ ಹನಿಮೂನ್ ಮುಗಿಸಿದ್ದಾಳೆ. ಟಿಕ್ ಟಾಕ್ ನಲ್ಲಿ ಯೂಲಿಯಾ ಈ ಸಂಗತಿಯನ್ನು ಹಂಚಿಕೊಂಡಿದ್ದಾಳೆ. ಮನೆಯವರು ಅದ್ಧೂರಿಯಾಗಿ ಮದುವೆ ಮಾಡಲು ಬಯಸಿದ್ದರಂತೆ. ಇದಕ್ಕೆ 11 ಲಕ್ಷ ಖರ್ಚಾಗುತ್ತಿತ್ತಂತೆ. ಇದನ್ನು ಉಳಿಸಿದ ಯೂಲಿಯಾ, ನಾಲ್ಕು ದೇಶ ಸುತ್ತಿ ಬಂದಿದ್ದಾಳೆ.
ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಸುದ್ದಿ: ಡಿಎ ಶೇಕಡ 3 ರಷ್ಟು ಹೆಚ್ಚಳ ಸಾಧ್ಯತೆ
ಅಪರಿಚಿತರನ್ನು ಮದುವೆಗೆ ಕರೆಯಲು ಇಷ್ಟಪಡದ ಯೂಲಿಯಾ, ಕೇವಲ ಇಬ್ಬರು ಸ್ನೇಹಿತರನ್ನು ಮದುವೆಗೆ ಆಹ್ವಾನಿಸಿದ್ದಳಂತೆ. ಜೊತೆಗೆ ಕೇವಲ ಮೂರು ಸಾವಿರ ರೂಪಾಯಿ ಬೆಲೆಯ ಡ್ರೆಸ್ ಆರ್ಡರ್ ಮಾಡಿದ್ದಳಂತೆ. ಜನರು ನನ್ನ ನಿರ್ಧಾರದ ಬಗ್ಗೆ ಏನೇ ಹೇಳಲಿ. ನಾನು ಖುಷಿಯಾಗಿದ್ದೇನೆಂದು ಆಕೆ ವಿಡಿಯೋದಲ್ಲಿ ಹೇಳಿದ್ದಾಳೆ. ಯೂಲಿಯಾ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿವೆ.