alex Certify ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಸುದ್ದಿ: ಡಿಎ ಶೇಕಡ 3 ರಷ್ಟು ಹೆಚ್ಚಳ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಸುದ್ದಿ: ಡಿಎ ಶೇಕಡ 3 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಬಹಳ ದಿನಗಳಿಂದ ಡಿಎ ಗಾಗಿ ಕಾಯುತ್ತಿದ್ದ ನೌಕರರು, ಪಿಂಚಣಿದಾರರಿಗೆ ಜುಲೈ 1 ರಿಂದ ಅನ್ವಯವಾಗುವಂತೆ ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲಾಗುವುದು. ಇದರೊಂದಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಈ ತಿಂಗಳಲ್ಲಿ ಡಿಎ ಶೇಕಡ 3 ರಷ್ಟು ಹೆಚ್ಚಾಗಬಹುದು ಎನ್ನಲಾಗಿದೆ.

ದೀಪಾವಳಿಗೆ ಮುಂಚಿತವಾಗಿ, ಶೇ. 3 ಡಿಎ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದು ಸಾಧ್ಯವಾದಲ್ಲಿ ಒಟ್ಟು ಡಿಯರ್ನೆಸ್ ಭತ್ಯೆ ಶೇ. 31 ಆಗಲಿದೆ.

ಉದ್ಯೋಗಿಗಳು ಹಣದುಬ್ಬರದಿಂದ ಸ್ವಲ್ಪ ಪರಿಹಾರವನ್ನು ಪಡೆಯಲು ಸರ್ಕಾರವು ಶೀಘ್ರದಲ್ಲೇ ಶೇ. 3 ರಷ್ಟು ಡಿಯರ್ನೆಸ್ ಭತ್ಯೆ ಹೆಚ್ಚಳ ಘೋಷಿಸಬೇಕು ಎಂದು ನೌಕರರ ಸಂಘವು ಒತ್ತಾಯಿಸುತ್ತಿದೆ. ಎಐಸಿಪಿಐ ಸೂಚ್ಯಂಕದ ಡೇಟಾ 121.7 ಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಜೂನ್ 2021 ರ ಡಿಯರ್ನೆಸ್ ಭತ್ಯೆಯನ್ನು ಶೇ 3 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಶೇಕಡ 31.18 ಕ್ಕೆ ಏರಿಕೆ ಆಗಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...