ಜಗತ್ತಿನಲ್ಲಿ ವಿಚಿತ್ರವಾದ ವಿವಾಹ ಪದ್ಧತಿಗಳಿವೆ ಮತ್ತು ಅವು ನಮ್ಮನ್ನು ಬೆರಗುಗೊಳಿಸುತ್ತವೆ. ದಕ್ಷಿಣ ಕೊರಿಯಾದಲ್ಲಿ ಅತಿಥಿಗಳು ಬೆತ್ತ ಅಥವಾ ಒಣಗಿದ ಮೀನಿನಿಂದ ವರನ ಪಾದಗಳಿಗೆ ಹೊಡೆಯುವ ವಿಚಿತ್ರ ಪದ್ಧತಿ ಇದೆ. ಆದರೆ ಈ ವಧು-ವರರು ವಿಭಿನ್ನ ರೀತಿಯಲ್ಲಿ ಸುದ್ದಿಯಾಗಿದ್ದಾರೆ. ಪ್ರತಿಯೊಬ್ಬ ಅತಿಥಿಯು ಮದುವೆಗೆ ಉಡುಗೊರೆಯಾಗಿ £ 250 (ರೂ. 24,200) ತರುವಂತೆ ಕೇಳಿಕೊಂಡಿದ್ದಾಳೆ !
ರೆಡ್ಡಿಟ್‌ನಲ್ಲಿ ಸುದೀರ್ಘ ಟಿಪ್ಪಣಿಯನ್ನು ಪೋಸ್ಟ್ ಮಾಡಿರುವ ವಧುವಿನ ಸ್ನೇಹಿತೆ, ಆಶೀರ್ವಾದವೆಯೇ ಉಡುಗೊರೆಯ ಬದಲು, ಹಣವೇ ಉಡುಗೊರೆ ಎಂದು ಹೇಳಿದ್ದು, ಮದುವೆಗೆ ಬರುವವರು ದುಡ್ಡು ಕೊಡುವಂತೆ ಕೇಳಿಕೊಂಡಿರುವ ಬಗ್ಗೆ ತಿಳಿಸಿದ್ದಾಳೆ.
“ನಾನು ವಧು-ವರರೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಸ್ನೇಹ ಹೊಂದಿದ್ದೇನೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಮದುವೆ ನಡೆಯಲಿದೆ. ಉಡುಗೊರೆ ರೂಪದಲ್ಲಿ ಹಣ ತರುವಂತೆ ಸ್ನೇಹಿತೆ ಹೇಳಿದ್ದಾಳೆ. ಇದರಿಂದ ಆಘಾತಕ್ಕೊಳಗಾಗಿದ್ದೇನೆ, ಏಕೆಂದರೆ ಮೊತ್ತವು ಬಹಳ ದುಬಾರಿಯಾಗಿದೆ. ಈ ಬಗ್ಗೆ ಸ್ನೇಹಿತೆಯನ್ನು ಕೇಳಿದಾಗ ಇದು ತಮಾಷೆಯಲ್ಲ, ಕಡ್ಡಾಯ. ಹಣ ತರದಿದ್ದರೆ ಮದುವೆಗೆ ಎಂಟ್ರಿ ಇಲ್ಲ ಎಂದಿದ್ದಾಳೆ” ಎಂದು ಸ್ನೇಹಿತೆ ಬರೆದುಕೊಂಡಿದ್ದಾಳೆ.
ವಧು ಬೆಲ್ಜಿಯಂನವಳಾಗಿದ್ದು, ಅಲ್ಲಿ ಹೀಗೆ ಹಣ ನೀಡುವುದು ಮಾಮೂಲಂತೆ. ಅದಕ್ಕಾಗಿಯೇ ನಾನು ಹೀಗೆ ಡಿಮಾಂಡ್ ಇಟ್ಟಿರುವುದಾಗಿ ಹೇಳಿದ್ದಾಳೆ. ಒಟ್ಟಿನಲ್ಲಿ ಈ ಪೋಸ್ಟ್ ಭಾರಿ ವೈರಲ್ ಆಗಿದ್ದು, ಜನ ಹುಬ್ಬೇರಿಸುತ್ತಿದ್ದಾರೆ.