ಮದುವೆಯ ನೃತ್ಯಗಳು ಯಾವಾಗಲೂ ನೋಡಲು ವಿನೋದಮಯವಾಗಿರುತ್ತವೆ. ಇಂಥ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ, ವಧು ಮತ್ತು ವರರು ನೃತ್ಯ ಮಾಡಿ ವೇದಿಕೆಗೆ ಕಿಚ್ಚು ಹಚ್ಚುವುದು ಇದೆ.
ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ಕನಿಷ್ಕ್ ಸೇಠ್ ಮತ್ತು ಕವಿತಾ ಸೇಠ್ ಅವರ ರಂಗಿ ಸಾರಿಗೆ ವಧು-ವರರು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚಿಂದಿ ಉಡಾಯಿಸುತ್ತಿದೆ.
ವೈರಲ್ ವಿಡಿಯೋದಲ್ಲಿ ಈ ಜೋಡಿ ವೇದಿಕೆಯನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ರಂಗಿ ಸಾರಿ ಹಾಡಿಗೆ ಶಕ್ತಿಯುತವಾಗಿ ಸ್ಟೆಪ್ ಹಾಕುವುದನ್ನು ವೀಡಿಯೊ ತೋರಿಸುತ್ತದೆ. ಅವರು ನೃತ್ಯ ಮಾಡುವಾಗ, ಅವರ ಸುತ್ತಲಿರುವ ಹಲವಾರು ಜನರು ಅವರನ್ನು ವಿಸ್ಮಯದಿಂದ ವೀಕ್ಷಿಸುತ್ತಾರೆ ಮತ್ತು ಅವರಿಗೆ ಹುರಿದುಂಬಿಸುತ್ತಾರೆ. ಈ ವೀಡಿಯೊವನ್ನು ಇನ್ಸ್ಸ್ಟಾಗ್ರಾಮ್ ಪುಟ @weddingz.in ನಲ್ಲಿ ಹಂಚಿಕೊಳ್ಳಲಾಗಿದ್ದು ಇದಾಗಲೇ ಸಹಸ್ರಾರು ಮಂದಿ ವೀಕ್ಷಿಸಿದ್ದಾರೆ.
https://youtu.be/LaEmJnyQf7Q