alex Certify ʼಫ್ಯಾಕ್ಟ್​ ಚೆಕ್ʼ ನಲ್ಲಿ ವೈರಲ್‌ ವಿಡಿಯೋ ಹಿಂದಿನ ಅಸಲಿಯತ್ತು ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಫ್ಯಾಕ್ಟ್​ ಚೆಕ್ʼ ನಲ್ಲಿ ವೈರಲ್‌ ವಿಡಿಯೋ ಹಿಂದಿನ ಅಸಲಿಯತ್ತು ಬಹಿರಂಗ

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಮಂಗಳ ಗ್ರಹದ ಮೇಲಿನ ಅಧ್ಯಯನಕ್ಕಾಗಿ ಪರ್ಸಿವಿಯರೆನ್ಸ್​ ರೋವರ್​​ನ್ನು ಕಳುಹಿಸಿಕೊಟ್ಟಿದ್ದು ಇದು ಫೆಬ್ರವರಿ 18ರಂದು ಮಂಗಳ ಗ್ರಹದ ಕುತೂಹಲಕಾರಿ ಫೋಟೋಗಳನ್ನ ಸೆರೆ ಹಿಡಿದು ನಾಸಾಗೆ ಕಳುಹಿಸಿದೆ.

ಪರ್ಸಿವಿಯರೆನ್ಸ್​ ಕಳುಹಿಸಿದ ಫೋಟೋಗಳನ್ನ ನಾಸಾ ಶುಕ್ರವಾರ ಬಿಡುಗಡೆ ಮಾಡಿದೆ. ಮಂಗಳ ಗ್ರಹದ ಮೇಲ್ಮೈ ವಾತಾವರಣವನ್ನ ಸ್ಪಷ್ಟವಾಗಿ ತೋರಿಸುವ ಚಿತ್ರ ಇದಾಗಿದ್ದು ಈ ಕುತೂಹಲಕಾರಿ ಫೋಟೋಗಳನ್ನ ಕಂಡು ವಿಜ್ಞಾನಿಗಳೇ ಆಶ್ಚರ್ಯಚಕಿತರಾಗಿದ್ದಾರೆ.

ಇನ್ನು ನಾಸಾ ಮಂಗಳ ಗ್ರಹದ ಫೋಟೋಗಳನ್ನ ಬಿಡುಗಡೆ ಮಾಡಿದ ಬೆನ್ನಲ್ಲೇ ಪರ್ಸಿವಿರೆನ್ಸ್ ಕಳುಹಿಸಿಕೊಟ್ಟಿದೆ ಎನ್ನಲಾದ ಮಂಗಳ ಗ್ರಹದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಲೇಖಕ ಜೇಮ್ಸ್ ಹಾಲೆಂಡ್ ಸೇರಿದಂತೆ ಅನೇಕರು ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಂಗಳ ಗ್ರಹದಲ್ಲಿ ಕೇಳಿ ಬಂದ ಶಬ್ದ ಕೂಡ ರೆಕಾರ್ಡ್ ಆಗಿದೆ ಎಂದು ಹೇಳಲಾಗಿತ್ತು.

ಆದರೆ ಫ್ಯಾಕ್ಟ್​ ಚೆಕ್​ ವೇಳೆ ವಿಡಿಯೋದ ಅಸಲಿ ಚಿತ್ರಣ ಬಯಲಾಗಿದೆ. ಇದು ನಾಸಾದ ಕ್ಯುರೋಸಿಟಿ ಮಾರ್ಸ್​ರೋವರ್​ನ ವಿಡಿಯೋ ಆಗಿದ್ದು, ನಾಸಾ 2020ರ ಮಾರ್ಚ್​ 4ರಂದು ತನ್ನ ಯುಟ್ಯುಬ್​ ಪೇಜ್​​ನಲ್ಲಿ ಅಪ್​ಲೋಡ್​ ಮಾಡಿತ್ತು.

https://twitter.com/i/status/1362790899361677312

— Stephen King (@StephenKing) February 20, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...