alex Certify BREAKING: ವಿಜಯ್​ ಮಲ್ಯ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ…? ಅಂತಿಮ ಹಂತ ತಲುಪಿದ ಕಾನೂನು ಪ್ರಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ವಿಜಯ್​ ಮಲ್ಯ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ…? ಅಂತಿಮ ಹಂತ ತಲುಪಿದ ಕಾನೂನು ಪ್ರಕ್ರಿಯೆ

ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ವಿಜಯ್ ಮಲ್ಯರನ್ನು ಬ್ರಿಟನ್​ನಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯು ಅಂತಿಮ ಹಂತ ತಲುಪಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿದೆ. ಹಸ್ತಾಂತರ ಪ್ರಕ್ರಿಯೆಯಲ್ಲಿ ಕೆಲವೊಂದು ಗೌಪ್ಯ ಹಂತಗಳು ಬ್ರಿಟನ್​ನಲ್ಲಿ ಬಾಕಿ ಉಳಿದಿದೆ. ಬ್ರಿಟನ್ ​​ನಲ್ಲಿ ಮೇಲ್ಮನವಿ ಸಲ್ಲಿಸುವ ಎಲ್ಲಾ ಹಾದಿಗಳನ್ನೂ ಈಗಾಗಲೇ ಮುಗಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಬ್ಯಾಂಕ್​ಗಳಿಂದ ಸುಮಾರು 9000 ಕೋಟಿಗೂ ಅಧಿಕ ಮೊತ್ತದ ಹಣವನ್ನು ಸಾಲದ ರೂಪದಲ್ಲಿ ಪಡೆದು ಅವುಗಳನ್ನು ಹಿಂದಿರುಗಿಸದೇ ವಿದೇಶಕ್ಕೆ ಪರಾರಿಯಾಗುವ ಮೂಲಕ ಮಲ್ಯ ಆರ್ಥಿಕ ವಂಚನೆ ಆರೋಪ ಎದುರಿಸುತ್ತಿದ್ದಾರೆ. ಮದ್ಯದ ದೊರೆ ಮಲ್ಯ 2016ರ ಮಾರ್ಚ್ ತಿಂಗಳಿನಿಂದ ಬ್ರಿಟನ್​​ನಲ್ಲಿಯೇ ಇದ್ದಾರೆ.

ಕೇಂದ್ರ ಪ್ರತಿಕ್ರಿಯೆಯನ್ನು ಆಲಿಸಿದ ಸುಪ್ರೀಂ ಕೋರ್ಟ್​, ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವಲ್ಲಿ ಇನ್ನಷ್ಟು ಕಾಯಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಶಿಕ್ಷೆಯ ಪ್ರಮಾಣದ ವಿಚಾರಣೆಗೆ 2022ರ ಜನವರಿ 18ಕ್ಕೆ ಸುಪ್ರೀಂಕೋರ್ಟ್ ಮುಹೂರ್ತ ನಿಗದಿ ಮಾಡಿದೆ.

ಸದ್ಯ ಬ್ರಿಟನ್​ನಲ್ಲಿರುವ ವಿಜಯ್​ ಮಲ್ಯರನ್ನು ಹಸ್ತಾಂತರ ಮಾಡಿಕೊಳ್ಳಲು ಭಾರತ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಮಲ್ಯ ನಿಗದಿ ಮಾಡಿದ ದಿನಾಂಕದಂದು ನ್ಯಾಯಾಲಯದ ಮುಂದೆ ಹಾಜರಾಗದೇ ಇದ್ದರೂ ಸಹ ಕೋರ್ಟ್​ ಮಲ್ಯ ಪರ ವಕೀಲರನ್ನೇ ಕೇಳುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಈ ಪ್ರಕರಣದಲ್ಲಿ ತನಗೆ ಸಲಹೆ ಹಾಗೂ ಸಹಾಯವನ್ನು ಪಡೆದುಕೊಳ್ಳಲು ಹಿರಿಯ ವಕೀಲ ಜೈದೀಪ್​ ಗುಪ್ತಾರನ್ನು ಅಮಿಕಸ್​ ಕ್ಯೂರಿಯಾಗಿ ಸುಪ್ರೀಂ ನೇಮಿಸಿದೆ.

ಈ ಹಿಂದೆ ಪ್ರಕರಣದಲ್ಲಿ ಮಲ್ಯ ಪರ ವಕೀಲನ ಸ್ಥಾನದಿಂದ ತನ್ನನ್ನು ಬಿಡುಗಡೆ ಮಾಡುವಂತೆ ವಕೀಲ ಇಸಿ ಅಗರ್​ವಾಲ್​​ ಮನವಿ ಮಾಡಿದ್ದರು. ಆದರೆ ಇದನ್ನು ಕೋರ್ಟ್ ತಿರಸ್ಕರಿಸಿತ್ತು.

ಕಳೆದ ವರ್ಷ ನವೆಂಬರ್​ 2ರಂದು ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಬ್ರಿಟನ್​ನಲ್ಲಿ ಬಾಕಿ ಉಳಿದಿರುವ ಗೌಪ್ಯ ಕಾನೂನು ಪ್ರಕ್ರಿಯೆಗಳ ಕುರಿತು ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...