ಬೆಂಗಳೂರು : ವಿಧಾನಸೌಧಲ್ಲಿ ಜೋರಾದ ಪಾಕ್ ಜಿಂದಾಬಾದ್ ಜಟಾಪಟಿ ಜೋರಾಗಿದ್ದು, ಸದನದ ಬಾವಿಗೆ ಇಳಿದು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಭಾಪತಿ ಕುರ್ಚಿ ಎದುರೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದಿದೆ.
ಅಬ್ದುಲ್ ಜಬ್ಬಾರ್ ಅವರು ಪರಿಷತ್ ನಲ್ಲಿ ಮಾತನಾಡುತ್ತಿದ್ದ ರವಿಕುಮಾರ್ ಅವರಿಗೆ ಮೊದಲು ಅವನ ಬಾಯಿ ಮುಚ್ಚಿಸಿ ಎಂದು ರವಿಕುಮಾರ್ ಗೆ ಏಕವಚನದಲ್ಲೇ ಹೇಳಿದ್ದಾರೆ. ಈ ವೇಳೆ ಸರ್ಕಾರವನ್ನು ಜವಾ ಮಾಡುವಂತೆ ಪಟ್ಟು ಹಿಡಿದಿದ್ದಾರೆ.