alex Certify BREAKING : ಬೆಂಗಳೂರಿಗೆ ಆಗಮಿಸಿದ ‘ರಣದೀಪ್ ಸಿಂಗ್ ಸುರ್ಜೆವಾಲಾ’ : ಸ್ವಾಗತ ಕೋರಿದ ಕಾಂಗ್ರೆಸ್ ನಾಯಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಿಗೆ ಆಗಮಿಸಿದ ‘ರಣದೀಪ್ ಸಿಂಗ್ ಸುರ್ಜೆವಾಲಾ’ : ಸ್ವಾಗತ ಕೋರಿದ ಕಾಂಗ್ರೆಸ್ ನಾಯಕರು

ಬೆಂಗಳೂರು : ನಿಗಮ ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಸಭೆ ನಡೆಯಲಿದ್ದು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ.

ಕೆಂಪೇಗೌಡ ಏರ್ ಪೋರ್ಟ್ ಗೆ ರಣದೀಪ್ ಸುರ್ಜೆವಾಲಾ ಆಗಮಿಸಿದ್ದು, ಕಾಂಗ್ರೆಸ್ ನಾಯಕರು ಸ್ವಾಗತ ಕೋರಿದ್ದಾರೆ.

ನಂತರ ಮಧ್ಯಾಹ್ನ 2ಗಂಟೆಗೆ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮೊದಲ ಹಂತದ ಸಭೆ ನಡೆಸಲಿದ್ದು, ಸಭೆಯಲ್ಲಿ ನಿಗಮ ಮಂಡಳಿಗೆ ಪಟ್ಟಿ ಫೈನಲ್ ಮಾಡುವ ಸಾಧ್ಯತೆ ಇದೆ. ಶಾಸಕರಾದ ಬಸವರಾಜ್ ರಾಯರೆಡ್ಡಿ, ನರೇಂದ್ರ ಸ್ವಾಮಿ, ವಿನಯ್ ಕುಲ್ಕರ್ಣಿ, ರೂಪಾ ಶಶಿಧರ್, ರಾಜೇಗೌಡ, ರಘು ಮೂರ್ತಿ, ಗಣೇಶ್ ಹುಕ್ಕೇರಿ, ವಿಜಯಾನಂದ ಕಾಶಪ್ಪನವರ್, ಶಿವಲಿಂಗೇಗೌಡ, ಬಿ.ಕೆ.ಸಂಗಮೇಶ್ ಸೇರಿದಂತೆ ಹಲವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದ್ದು, ಇಂದೇ ಪಟ್ಟಿ ಫೈನಲ್ ಆಗುವ ಸಾಧ್ಯತೆಯಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...