alex Certify BREAKING : ಬೆಂಗಳೂರಿನ ಜನತೆಗೆ ಮತ್ತೆ ಚಿರತೆ ಆತಂಕ : ವೈಟ್ ಫೀಲ್ಡ್ ಸುತ್ತಮುತ್ತ ಚಿರತೆ ಪ್ರತ್ಯೇಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಿನ ಜನತೆಗೆ ಮತ್ತೆ ಚಿರತೆ ಆತಂಕ : ವೈಟ್ ಫೀಲ್ಡ್ ಸುತ್ತಮುತ್ತ ಚಿರತೆ ಪ್ರತ್ಯೇಕ್ಷ

 

ಬೆಂಗಳೂರು : ಬೆಂಗಳೂರಿನ ಜನತೆಗೆ ಮತ್ತೊಮ್ಮೆ ಚಿರತೆ ಆತಂಕ ಎದುರಾಗಿದ್ದು,  ವೈಟ್ ಫೀಲ್ಡ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಓಡಾಟ ನಡೆಸಿದೆ.

ಬೆಂಗಳೂರಿನ ವೈಟ್ ಫೀಲ್ಡ್, ಕೂಡ್ಲುವಿನ ಎಇಸಿಎಸ್ ಲೇಔಟ್ ಬಳಿ ರಾತ್ರಿ ಹೊತ್ತು ಕಾರಿಗೆ ಅಡ್ಡಲಾಗಿ ಚಿರತೆ ಓಡಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಚಿರತೆ ಓಡಾಟದಿಂದ ಸ್ಥಳೀಯ ಜನರಲ್ಲಿ ಆತಂಕ ಎದುರಾಗಿದೆ.

ವೈಟ್ ಫೀಲ್ಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಓಡಾಟ ನಡೆಸಿರುವುದು ಇದು ಎರಡನೇ ಬಾರಿಯಾಗಿದೆ. ಚಿರತೆ ಪ್ರತ್ಯಕ್ಷವಾಗಿರುವುದರಿಂದ ಜನರಲ್ಲಿ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...