ದೇಶದ ಭದ್ರತೆ ಕುರಿತ ರಹಸ್ಯ ಮಾಹಿತಿಗಳನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರೆ ತೊಯ್ಬಾದೊಂದಿಗೆ ಹಂಚಿಕೊಂಡ ಆಪಾದನೆ ಮೇಲೆ ಮಾಜಿ ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.
2011ರಲ್ಲಿ ಐಪಿಎಸ್ ಹುದ್ದೆಗೆ ತೇರ್ಗಡೆ ಹೊಂದಿದ್ದ ನೇಗಿ ನವೆಂಬರ್ 6ರಂದು ದಾಖಲಿಸಲಾದ ಪ್ರಕರಣವೊಂದರ ಸಂಬಂಧ ಬಂಧಿಸಲ್ಪಟ್ಟಿದ್ದಾರೆ. ಇದೇ ಅಧಿಕಾರಿ ಎನ್‌ಐಎ ಅಂಗವಾಗಿ ಕೆಲಸ ಮಾಡುತ್ತಿದ್ದರು. ಲಷ್ಕರೆ ತೊಯ್ಬಾದ ಕಾರ್ಯಕರ್ತರೊಂದಿಗೆ ನಿಕಟವಾಗಿದ್ದುಕೊಂಡು, ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಲು ನೆರವಾದ ಆಪಾದನೆ ಈ ಅಧಿಕಾರಿ ಮೇಲಿದೆ. ಹಿಮಾಚಲ ಪ್ರದೇಶದಲ್ಲಿರುವ ಅಧಿಕಾರಿಯ ಮನೆಯನ್ನು ಎನ್‌ಐಎ ಜಪ್ತಿ ಮಾಡಿಕೊಂಡಿದೆ.
ಅಭಿಮಾನಿ ಜೊತೆ ರಣಬೀರ್ ಕಪೂರ್ ವರ್ತನೆ ಕಂಡು ಕೆಂಡಾಮಂಡಲಗೊಂಡ ನೆಟ್ಟಿಗರು..! ವಿಡಿಯೋ ವೈರಲ್
“ಶಿಮ್ಲಾದಲ್ಲಿ ಎಸ್‌ಪಿ ಆಗಿ ಅಧಿಕಾರದಲ್ಲಿದ್ದ ಎ ಡಿ ನೇಗಿರ ಪಾತ್ರವನ್ನು ಖಾತ್ರಿಪಡಿಸಿಕೊಂಡ ಬಳಿಕ ಅವರ ಮನೆಗಳ ಮೇಲೆ ದಾಳಿ ಮಾಡಲಾಗಿತ್ತು. ಇದೇ ವೇಳೆ, ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಎಲ್‌ಇಟಿಯ ಕಾರ್ಯಕರ್ತನೊಂದಿಗೆ ಎನ್‌ಐಎನ ರಹಸ್ಯ ದಾಖಲೆಗಳನ್ನು ನೇಗಿ ಸೋರಿಕೆ ಮಾಡಿರುವುದು ಕಂಡು ಬಂದಿದೆ” ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.