alex Certify ಅಭಿಮಾನಿ ಜೊತೆ ರಣಬೀರ್​ ಕಪೂರ್​ ವರ್ತನೆ ಕಂಡು ಕೆಂಡಾಮಂಡಲಗೊಂಡ ನೆಟ್ಟಿಗರು..! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿ ಜೊತೆ ರಣಬೀರ್​ ಕಪೂರ್​ ವರ್ತನೆ ಕಂಡು ಕೆಂಡಾಮಂಡಲಗೊಂಡ ನೆಟ್ಟಿಗರು..! ವಿಡಿಯೋ ವೈರಲ್

ಸಿನಿಮಾದಲ್ಲಿ ಕಾಣಿಸುವ ಹೀರೋಗಳನ್ನು ಆರಾಧಿಸೋಕೆ ಭಾರತೀಯರಿಗೆ ಹೆಚ್ಚಿಗೆ ಹೇಳಿಕೊಡಬೇಕಾಗಿಲ್ಲ. ಯಾವುದಾದರೊಂದು ನಾಯಕ ನಟ ಇಷ್ಟವಾದರು ಅಂದರೆ ಮುಗೀತು ಅಭಿಮಾನಿಗಳು ಅವರದ್ದೇ ಸ್ಟೈಲ್​ನ್ನು ಫಾಲೋ ಮಾಡಲು ಆರಂಭಿಸುತ್ತಾರೆ.

ಅದೇ ರೀತಿ ರಣಬೀರ್​ ಕಪೂರ್​ ಅಭಿಮಾನಿ ಕೂಡ ತನ್ನ ನೆಚ್ಚಿನ ನಟನಂತೆ ಟ್ಯಾಟೂ ಹಾಕಿಸಿಕೊಂಡಿದ್ದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಯ ವಿಚಾರವಾಗಿದೆ.

ಕಾರಿನಲ್ಲಿದ್ದ ಬಾಲಿವುಡ್​ ನಟ ರಣಬೀರ್​ ಕಪೂರ್​​ ಬಳಿ ಬಂದ ಅಭಿಮಾನಿಯೊಬ್ಬ ತಾನೂ ಕೂಡ ನಿಮ್ಮಂತೆ ‘ಆವಾರಾ’ ಎಂಬ ಟ್ಯಾಟೂವನ್ನು ಕೈ ಮೇಲೆ ಹಾಕಿಸಿಕೊಂಡಿದ್ದೇನೆ ಎಂದು ತೋರಿಸಿದ್ದಾರೆ.

ಇದನ್ನು ನೋಡಿದ ರಣಬೀರ್​ ಕಪೂರ್​​ ಇದು ಸ್ಟಿಕ್ಕರ್​ ಎಂದು ಲೇವಡಿ ಮಾಡಿದ್ದಾರೆ. ಅಭಿಮಾನಿಯು, ಇಲ್ಲ ನಾನು ನಿಜವಾಗಿಯೂ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದರೂ ನಂಬದ ರಣಬೀರ್​​ ಥಂಬ್ಸ್​ ಅಪ್​ ಮಾಡುತ್ತಾ ಕಾರಿನ ಗಾಜನ್ನು ಏರಿಸಿದ್ದಾರೆ. ಅಭಿಮಾನಿಯ ಎದುರು ರಣಬೀರ್​ ಕಪೂರ್​ರ ಈ ನಡವಳಿಕೆ ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.

SHOCKING: ಅನೈತಿಕ ಸಂಬಂಧ ಬೆಳೆಸಿದ ಅಣ್ಣ-ತಂಗಿಯಿಂದಲೇ ಘೋರ ಕೃತ್ಯ

ಏನಿದು ಆವಾರಾ ಟ್ಯಾಟೂ..?

2013ರಲ್ಲಿ ರಣಬೀರ್​ ಕಪೂರ್​ ಕೈಯಲ್ಲಿ ಇದೇ ರೀತಿ ಆವಾರಾ ಎಂದು ಬರೆಯಲಾದ ಟ್ಯಾಟೂ ಸಾಕಷ್ಟು ಬಾರಿ ಕಾಣಿಸಿಕೊಂಡಿದೆ. ದೀಪಿಕಾ ಪಡುಕೋಣೆ ಜೊತೆಯಲ್ಲಿ ನಟಿಸಿದ ಯೇ ಜವಾನಿ ಹೈ ದಿವಾನಿ ಸಿನಿಮಾದ ಪ್ರಮೋಷನ್​ ವೇಳೆಯಲ್ಲಿ ರಣಬೀರ್ ಕೈಯಲ್ಲಿ ಈ ರೀತಿಯ ಟ್ಯಾಟೂ ಇರುವುದನ್ನು ಅನೇಕರು ಗಮನಿಸಿದ್ದರು.

ಆದರೆ ಇದು ಶಾಶ್ವತ ಟ್ಯಾಟೋವೋ ಅಥವಾ ತಾತ್ಕಾಲಿಕವೋ ಎಂಬುದು ಯಾರಿಗೂ ತಿಳಿದಿಲ್ಲ. ಆವಾರಾ 1951ರಲ್ಲಿ ತೆರೆ ಕಂಡ ರಣಬೀರ್​ ಕಪೂರ್​ರ ಅಜ್ಜ ರಾಜ್​ ಕಪೂರ್​ರ ಹಿಟ್​ ಸಿನಿಮಾವಾಗಿತ್ತು.

ರಣಬೀರ್​ ಕಪೂರ್​ರಂತೆಯೇ ತಾನೂ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಯ ಜೊತೆಯಲ್ಲಿ ರಣಬೀರ್​ ನಡೆದುಕೊಂಡ ರೀತಿ ನೆಟ್ಟಿಗರಿಗೆ ಇಷ್ಟವಾದಂತೆ ಕಾಣುತ್ತಿಲ್ಲ. ಅನೇಕರು ರಣಬೀರ್ ಕಪೂರ್​ ಅಭಿಮಾನಿಗೆ ಗೌರವ ನೀಡಿಲ್ಲ ಎಂದು ಕಿಡಿಕಾರಿದ್ದಾರೆ. ಇನ್ನು ಕೆಲವರು ಇಂತವರನ್ನು ಆರಾಧಿಸುತ್ತಾ ಟ್ಯಾಟೂ ಹಾಕಿಸಿಕೊಳ್ಳುವ ಬದಲು ನಿಮ್ಮ ಪೋಷಕರ ಹೆಸರನ್ನಾದರೂ ಟ್ಯಾಟೂ ಹಾಕಿಸಿ ಎಂದು ಕಿವಿಮಾತು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...