alex Certify BIG BREAKING: ವಿಮಾನ ಪತನವಾದ ಸ್ಥಳ ಪತ್ತೆ ಮಾಡಿದ ಸೇನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ವಿಮಾನ ಪತನವಾದ ಸ್ಥಳ ಪತ್ತೆ ಮಾಡಿದ ಸೇನೆ

4 ಮಂದಿ ಭಾರತೀಯರು ಸೇರಿದಂತೆ 22 ಮಂದಿ ಇದ್ದ ವಿಮಾನ ಪತನಗೊಂಡ ಸ್ಥಳವನ್ನು ನೇಪಾಳ ಸೇನೆ ಪತ್ತೆ ಮಾಡಿದೆ.

ನಿರಂತರ ಹುಡುಕಾಟದ ನಂತರ ರಕ್ಷಣಾ ಪಡೆಗಳು ವಿಮಾನ ಅಪಘಾತದ ಸ್ಥಳವನ್ನು ಪತ್ತೆಹಚ್ಚಿವೆ. ಸಾನೋಸ್ವೇರ್, ಥಾಸಾಂಗ್-2, ಮುಸ್ತಾಂಗ್‌ ನಲ್ಲಿ ವಿಮಾನ ಅಪಘಾತವಾಗಿದೆ. ಸ್ಥಳದ ದೃಶ್ಯವನ್ನು ಸಹ ಹಂಚಿಕೊಳ್ಳಲಾಗಿದೆ. ತಾರಾ ಏರ್‌ ನ ಸಣ್ಣ, ಅವಳಿ ಎಂಜಿನ್ ವಿಮಾನವು ಭಾನುವಾರ ಬೆಳಿಗ್ಗೆ ನೇಪಾಳದ ಪೋಖರಾನ್‌ ನಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿತ್ತು.

ಇದರಲ್ಲಿ ನಾಲ್ವರು ಭಾರತೀಯರು ಕೂಡ ಇದ್ದರು. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ವಿಮಾನ ಬೆಟ್ಟದ ಅಂಚಿಗೆ ಡಿಕ್ಕಿ ಹೊಡೆದು ಪತನವಾಗಿದೆ ಎಂದು ಹೇಳಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...